Advertisement

Britain ಭುಗಿಲೆದ್ದ ಹಿಂಸಾಚಾರ: ವಲಸಿಗ ವಿರೋಧಿಗಳಿಂದ ಪ್ರತಿಭಟನೆ

12:48 AM Aug 05, 2024 | Team Udayavani |

ಲಿವರ್‌ಪೂಲ್‌: ಇಂಗ್ಲೆಂಡ್‌ನ‌ ಸೌತ್‌ಪೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಟೇಲರ್‌-ಸ್ವಿಫ್ಟ್ ಥೀಮ್ಡ್ ಪಾರ್ಟಿಯಲ್ಲಿ 3 ಮಕ್ಕಳ ಹತ್ಯೆಯಾದ ಬಹುತೇಕ ವಾರದ ಬಳಿಕ ಇಂಗ್ಲೆಂಡ್‌ನ‌ ಹಲವೆಡೆ ವಲಸಿಗರ ವಿರೋಧಿಗಳಿಂದ ಹಿಂಸಾಚಾರ ಭುಗಿಲೆದ್ದಿದೆ.

Advertisement

ಈ ಸಂಬಂಧ ಈಗಾಗಲೇ 100 ಜನರನ್ನು ಪೊಲೀಸರು ವಶಕ್ಕೆ ಪಡೆದು, 23ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಇಂಗ್ಲೆಂಡ್‌ ಹಲ್‌, ಲಿವರ್‌ಪೂಲ್‌, ಬ್ರಿಸ್ಟಲ್‌, ಮ್ಯಾಂಚೆಸ್ಟರ್‌, ಸ್ಟಾಕ್‌-ಆನ್‌-ಟ್ರೆಂಟ್‌, ಬ್ಲ್ಯಾಕ್‌ಪೂಲ್‌ ಮತ್ತು ಬೆಲ್‌ಫಾಸ್ಟ್‌ನಲ್ಲಿ  ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಕೆಲವು ಪ್ರತಿಭಟನಕಾರರು ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅನೇಕ ಅಂಗಡಿಗಳನ್ನು ಲೂಟಿ ಮಾಡಲಾಗಿದೆ.  ಈ ಮತ್ತೂಂದೆಡೆ ಫ್ಯಾಸಿಸ್ಟ್‌ ವಿರೋಧಿ ಗುಂಪುಗಳಿಂದ ಪ್ರತಿಭಟನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next