Advertisement

Mahindra: XUV 700 ಎಂಜಿನ್‌ಗಳಲ್ಲಿ ದೋಷ

10:32 PM Aug 19, 2023 | Team Udayavani |

ನವದೆಹಲಿ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ನ್ಪೋರ್ಟ್ಸ್ ಯುಟಿಲಿಟಿ ವಾಹನ ಎಕ್ಸ್‌ಯುವಿ 700 ಕಾರಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಇವುಗಳ ಪರಿಶೀಲನೆಗೆ ಕಂಪನಿ ಮುಂದಾಗಿದೆ. 2021ರ ಜೂ.8ರಿಂದ 2023ರ ಜೂ.28ರವರೆಗೆ ತಯಾರಾದ 1,08,306 ಎಕ್ಸ್‌ಯುವಿ 700 ಕಾರುಗಳಲ್ಲಿ ತಾಂತ್ರಿಕ ದೋಷದ ಸಾಧ್ಯತೆ ಇದೆ. ಹೀಗಾಗಿ ಈ ಕಾರುಗಳನ್ನು ಗ್ರಾಹಕರಿಂದ ಪಡೆದು, ಅವುಗಳನ್ನು ಪರಿಶೀಲಿಸಿ, ದೋಷ ಇದ್ದರೆ ಸರಿಪಡಿಸಿ, ಕಾರುಗಳನ್ನು ಮರಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.

Advertisement

ಮತ್ತೂಂದೆಡೆ, 2023ರ ಫೆ.16ರಿಂದ ಜೂ.5ರವರೆಗೆ ತಯಾರಾದ 3,560 ಎಕ್ಸ್‌ಯುವಿ 400 ಕಾರುಗಳ ಬ್ರೇಕ್‌ ಪೊಟೆನ್‌ಶಿಯೋಮೀಟರ್‌ನಲ್ಲಿ ದೋಷ ಕಂಡುಬಂದಿದೆ. ಈ ಎರಡೂ ಮಾದರಿಯ ಕಾರುಗಳನ್ನು ಉಚಿತವಾಗಿ ತಪಾಸಣೆಗೆ ಒಳಪಡಿಸಿ, ದೋಷ ಸರಿಪಡಿಸಲಾಗುವುದು. ಕಾರುಗಳ ಮಾಲೀಕರನ್ನು ಕಂಪನಿಯೇ ಸಂಪರ್ಕಿಸಲಿದೆ ಎಂದು ಮಹೀಂದ್ರಾ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next