ವಾಷಿಂಗ್ಟನ್: ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡಿರುವ ಎರಿಕ್ ಗಾರ್ಸೆಟಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
2021ರಲ್ಲಿ ಬೈಡೆನ್ ಸರಕಾರ ಗಾರ್ಸೆಟಿ ಅವರನ್ನು ಹುದ್ದೆಗೆ ನಾಮ ನಿರ್ದೇಶನಗೊಳಿಸಿದ್ದರೂ ಅಲ್ಲಿನ ಸಂಸತ್‌ನ ಅನುಮೋದನೆ ಸಿಕ್ಕರಲಿಲ್ಲ. ಹೀಗಾಗಿ ಎರಡು ವರ್ಷದಿಂದ ನೇಮಕ ವಿಳಂಬಗೊಂಡಿತ್ತು.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ರಾಯಭಾರಿ ಅಧ್ಯಕ್ಷ ಜೋ ಬೈಡೆನ್ ಅವರ ನಿಕಟವರ್ತಿ ಮತ್ತು ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಆಗಿದ್ದಾರೆ.
Related Articles
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಮಾತನಾಡಿದ ಗಾರ್ಸೆಟಿ “ನನ್ನನ್ನು ಈ ಹುದ್ದೆಗೆ ನೇಮಿಸಿದ ಅಧ್ಯಕ್ಷರಿಗೆ ಆಭಾರಿಯಾಗಿದ್ದೇನೆ. ಇದೊಂದು ಸಂತೋಷದಾಯಕ ವಿಚಾರ’ ಎಂದರು.