Advertisement

ಭಯೋತ್ಪಾದನೆ-ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ: PAKಗೆ ಜೈಶಂಕರ್‌ ಕಟು ಸಂದೇಶ

03:22 PM Aug 30, 2024 | Team Udayavani |

ನವದೆಹಲಿ: ಪಾಕಿಸ್ತಾನದ ಕುರಿತ ಭಾರತದ ನಿಲುವು ಏನು ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್‌ ಶುಕ್ರವಾರ (ಆ.30) ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಪಾಕ್‌ ಜತೆಗಿನ ಅನಿರ್ಬಂಧಿತ ಮಾತುಕತೆಯ ಕಾಲಘಟ್ಟ ಮುಗಿದುಹೋದ ಅಧ್ಯಾಯ ಎಂದು ತಿಳಿಸಿದ್ದಾರೆ.

Advertisement

ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮಕಾರಿಯಾಗಿರಬೇಕು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಭಾರತಕ್ಕೆ ಮಾಹಿತಿ ಇದೆ. ಹೀಗಾಗಿ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಜೈಶಂಕರ್‌ ಪಾಕ್‌ ಗೆ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಜತೆಗಿನ ಅನಿರ್ಬಂಧಿತ ಮಾತುಕತೆಯ ಕಾಲ ಮುಗಿದುಹೋಗಿದೆ ಎಂದು ಎಸ್.ಜೈಶಂಕರ್‌ ಶುಕ್ರವಾರ ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈವರೆಗೆ ಜಮ್ಮು-ಕಾಶ್ಮೀರದ ಬಗ್ಗೆ ಇದ್ದ ಕಳವಳಕ್ಕೆ ಪರಿಹಾರ ನೀಡಲು ಆರ್ಟಿಕಲ್‌ 370 ಅನ್ನು ರದ್ದುಪಡಿಸಲಾಗಿದೆ. ಆದರೆ ಭಯೋತ್ಪಾದನೆ ಚಟುವಟಿಕೆ, ಸೈನಿಕರ ಮೇಲಿನ ದಾಳಿ ಮುಂದುವರಿದಿದೆ. ಹೀಗಾಗಿ ಪಾಕಿಸ್ತಾನದ ಜತೆ ನಾವು ಯಾವ ರೀತಿಯ ಸಂಬಂಧ ಹೊಂದಿರಬೇಕೆಂಬ ಬಗ್ಗೆ ಆಲೋಚಿಸಬೇಕಾಗಿದೆ ಎಂದ ಸಚಿವ ಜೈಶಂಕರ್‌, ಭಯೋತ್ಪಾದನೆ ವಿಚಾರದಲ್ಲಿ ನಾವು ಯಾವ ರಾಜಿಗೂ ಸಿದ್ಧವಿಲ್ಲ ಎಂದು ಹೇಳಿದರು.

Advertisement

ಗಡಿ ನುಸುಳುವಿಕೆ ಭಯೋತ್ಪಾದನೆ ತಂತ್ರಗಾರಿಕೆ ಮೂಲಕ ಭಾರತವನ್ನು ಮಾತುಕತೆಗೆ ಆಹ್ವಾನಿಸುವ ಉದ್ದೇಶ ಪಾಕಿಸ್ತಾನದ್ದಾಗಿದೆ. ಆದರೆ ಇಂತಹ ವಿಚಾರಗಳು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂಬುದನ್ನು ಭಾರತ ಸ್ಪಷ್ಟಪಡಿಸಿದ್ದು, ಭಯೋತ್ಪಾದನೆ ಮತ್ತು ಮಾತುಕತೆ ಜತೆ, ಜತೆಗೆ ಹೋಗಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನವು ಇಸ್ಲಾಮಾಬಾದ್‌ ನಲ್ಲಿ ನಡೆಯಲಿರುವ ಶಾಂಘೈ ಕೋ ಆಪರೇಶನ್‌ ಆರ್ಗನೈಸೇಶನ್‌ ಸಭೆಗೆ ಅಧಿಕೃತವಾಗಿ ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜೈಶಂಕರ್‌ ಹೇಳಿಕೆ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next