Advertisement
ಡಾ| ಎಂ. ಮೋಹನ್ ಆಳ್ವರ ನೇತೃತ್ವ ದಲ್ಲಿ ಇಲ್ಲಿ ಮೂರು ದಿನಗಳ ಕಾಲ ಡಾ| ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿದರು. ಬಹುತ್ವದ ಕಲ್ಪನೆಯು ಸಹಸ್ರಮಾ ಗಳಿಂದಲೂ ಭಾರತದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಸಾಂಸ್ಕೃತಿಕ, ವೈಚಾರಿಕ ಬಹುತ್ವವೆಂದರೆ ಅನೇಕ ಸಹಭಾಗಿ ಸಂಸ್ಕೃತಿಗಳು, ವೈಚಾರಿಕ ಪ್ರಣಾಲಿ ಗಳು ಸಮಾನ ಹಕ್ಕುಗಳಿಂದ ತಮ್ಮ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಸಮಾಜವೊಂದರಲ್ಲಿ ಸಹ ಬಾಳ್ವೆ ಯನ್ನು ನಡೆಸುವುದೆಂದು ಸಿಎನ್‌ಆರ್ ವಿವರಿಸಿದರು. ಪ್ರಾಚೀನ ಹಾಗೂ ಅರ್ವಾಚೀನ ಕನ್ನಡ ಸಾಹಿತ್ಯದ ಮೂಲಕವೇ “ಬಹುತ್ವದೆಡೆಗೆ’ ಎಂಬ ಶೋಧ ವನ್ನು ಕೈಗೊಂಡಿ ರುವ ಈ ನುಡಿಸಿರಿ ಜ್ಞಾನ ದಾಸೋಹದ ಕಾರ್ಯವು ಸಾರ್ಥಕ ವಾಗಲಿ ಎಂದು ಸಿ. ಎನ್. ರಾಮ ಚಂದ್ರನ್ ಅವರು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಮುಖ್ಯ ಅತಿಥಿಯಾಗಿದ್ದರು. ಕನ್ನಡತನದ ಹಿರಿಮೆ ಗರಿಮೆ ಸಾರ್ವತ್ರಿಕವಾಗಲೆಂದು ಹಾರೈಸಿದರು. ಈ ನಿಟ್ಟಿನಲ್ಲಿ ಆಳ್ವಾಸ್ ನುಡಿಸಿರಿಯು ಆದರ್ಶವಾಗಿದೆ. ದೇಸಿ ಪರಂಪರೆಯ ಜತೆ ಆಧುನಿಕ ಚಿಂತನೆಯ ಬೆಸುಗೆ ಇಲ್ಲಿ ನಡೆಯುತ್ತದೆ ಎಂದು ಹೇಳಿದರು. ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ | ಗಣೇಶ್ ಕಾರ್ಣಿಕ್ ಗೌರವ ಅತಿಥಿಗಳಾಗಿದ್ದರು. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹರಿಕೃಷ್ಣ ಪುನರೂರು, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಪ್ರದೀಪ್ ಕಲ್ಕೂರ, ರೆ| ಫಾ| ಗೋಮ್ಸ್ , ಐಕಳ ಹರೀಶ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿದ್ದರು. ಆಳ್ವಾಸ್‌ನ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.
Related Articles
ತೇಜಸ್ವಿನಿ ಹೆಗಡೆ ಅವರ ಹಂಸಯಾನ ಕೃತಿ, ಗಣೇಶ್ ಭಾರತೀ- ಅಬ್ದುಲ್ ಹಮೀದ್ ಕೆ. ಪಿ. ರವಿಶಂಕರ್ ಅವರ ಕೃತಿಗಳನ್ನು ನಾಗತಿಹಳ್ಳಿ ಬಿಡು ಗಡೆಗೊಳಿಸಿದರು.
Advertisement
ನುಡಿಸಿರಿ ಅತ್ಯಂತ ಪ್ರಸ್ತುತ: ಸಿಎನ್ಆರ್ಮೋಹನ್ ಆಳ್ವ ಅವರು ನಿಪುಣರು; “ನುಡಿಸಿರಿ’ಯಂತಹ ಸಾವಿರಾರು ಜನರು ಸೇರುವ ಜ್ಞಾನ ದಾಸೋಹವನ್ನು ಅಚ್ಚು ಕಟ್ಟಾಗಿ, ಯಾವ ಕುಂದು ಕೊರತೆಯೂ ಯಾರಿಗೂ ಆಗ ದಂತೆ ಆಯೋ ಜಿಸುವುದು ಅಸಾಧ್ಯ ವೆಂದೇ ತೋರು ತ್ತದೆ. ಈ ಬಾರಿಯ “ನುಡಿಸಿರಿ’ಯ ಮೂಲಾಶಯವಾದ ಬಹುತ್ವದ ಪರಿಕಲ್ಪನೆಯೂ ಇಂದಿನ ಸಂದರ್ಭ ಎಂದರೆ, ಒಂದು ಧರ್ಮ- ಒಂದು ಭಾಷೆ- ಒಂದು ಸಂಸ್ಕೃತಿ- ಒಂದು ಆರ್ಥಿಕ ಪ್ರಣಾಲಿ ಇವುಗಳ ದಿಕ್ಕಿನಲ್ಲಿ ಭರ ದಿಂದ ಓಡುತ್ತಿರುವ ನಮ್ಮ ರಾಷ್ಟ್ರದ ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಪ್ರಸ್ತುತ. ತುಂಬಾ ತುರ್ತಿನ ಸವಾಲು ಕೂಡ.