Advertisement

ಕುಡಿಯುವ ನೀರು ನೀಡಲು ಸಜ್ಜಾಗಿ

03:45 AM Jan 06, 2017 | Harsha Rao |

ಉಡುಪಿ: ನಮ್ಮ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಅಧಿಕೃತವಾಗಿ ಘೋಷಿಸಲ್ಪಡದಿದ್ದರೂ ಬೇಸಗೆಯ‌ಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಜನರಿಗೆ ಕುಡಿಯುವ ನೀರಿನ ಅಭಾವ ಬಾರದಂತೆ ಮುನ್ನಚ್ಚರಿಕೆ ವಹಿಸಿ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿ ಹಾಗೂ ತುರ್ತು ಕುಡಿಯುವ ನೀರಿನ ಪೂರೈಕೆ ಸಮಸ್ಯೆಬಗ್ಗೆ ಜಿ.ಪಂ. ಎಂಜಿನಿಯರ್‌ ವಿಭಾಗ ಮತ್ತು ತಹಶೀಲ್ದಾರ್‌, ನಗರಸಭೆ, ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್‌ಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಕೃಷಿಗೆ ಹೊಳೆ ನೀರೆತ್ತದಂತೆ ನಿರ್ಬಂಧ
ಕೃಷಿಕರು ನೇರವಾಗಿ ಹೊಳೆಯಿಂದ ನೀರೆತ್ತ ದಂತೆ ಸೂಚನೆ ನೀಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಮೆಸ್ಕಾಂನಿಂದ ನೀಡಿರುವ ಸಂಪರ್ಕ ಮರು ಪರಿಶೀಲಿಸುವಂತೆ ಸೂಚಿಸಿದರು. 

ಬಹುಗ್ರಾಮ ಕುಡಿಯುವ ನೀರಿನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಜಿಲ್ಲೆಯ ಯಾವೆಲ್ಲ ಭಾಗಗಳು ಈ ಯೋಜನೆಯಡಿ ಬರುತ್ತಿವೆ ಎಂಬ ಮಾಹಿತಿಯನ್ನು ಅವರು ಪಡೆದುಕೊಂಡರು. 

ಟಾಸ್ಕ್ಫೋರ್ಸ್‌ನಡಿ ಉಡುಪಿ ತಾಲೂಕಿಗೆ 8, ಕುಂದಾಪುರಕ್ಕೆ 4, ಕಾರ್ಕಳಕ್ಕೆ 3 ಬೋರ್‌ವೆಲ್‌ ತುರ್ತಾಗಿ ಕೊರೆಸಲು ಹಾಗೂ ಇವುಗಳಲ್ಲಿ ನೀರಿನ ಲಭ್ಯತೆಗೆ ಕೊರತೆ ಇರಬಾರದು ಎಂದು ಎಚ್ಚರಿಕೆಯನ್ನೂ ಅವರು ನೀಡಿದರು.

Advertisement

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ವಿವಿಧ ಇಲಾಖೆಗಳಿಗೆ ಕುಡಿಯುವ ನೀರಿಗಾಗಿ ನೀಡಿದ ಅನುದಾನದ ಸಮಗ್ರ ಮಾಹಿತಿ ಸಲ್ಲಿಸುವಂತೆಯೂ ಸಚಿವರು ಹೇಳಿದರು. ಕಾರ್ಕಳಕ್ಕೆ ನೀರು ಪೂರೈಕೆಗೆ 14.15 ಲಕ್ಷ ರೂ., ಕುಂದಾಪುರಕ್ಕೆ 90 ಲಕ್ಷ ರೂ. ಅನುದಾನ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸಲು ಅಗತ್ಯವಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಉಪವಿಭಾಗಾಧಿಕಾರಿ ಶಿಲ್ಪಾ$ನಾಗ್‌, ಎಡಿಸಿ ಅನುರಾಧ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next