Advertisement
ನಗರದ ಹೋಟೆಲೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವಿ ಪಂಚನಾಥನ್ ಹಾಗೂ ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಮಾರೆ¾àಷನ್ ಸರ್ವೀಸಸ್ ಪ್ರೈ.ಲಿ., ವ್ಯವಸ್ಥಾಪಕ ನಿರ್ದೇಶಕ (ಕಂಟ್ರಿ ಹೆಡ್-ಭಾರತ) ಮತ್ತು ಎಂಇಎ ನಾಣಯ್ಯ ಕಲೆಂಗಡ ಅವರು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.
Related Articles
Advertisement
ಈಕ್ವಿಫ್ಯಾಕ್ಸ್ ವ್ಯವಸ್ಥಾಪಕ ನಿರ್ದೇಶಕ ನಾಣಯ್ಯ ಕಲೆಂಗಡ ಅವರು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸಸ್ ಜತೆಗೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಇಂದಿನ ದಿನಗಳಲ್ಲಿ ಪದವಿ ಜೊತೆ ಸೂಕ್ತ ಕೌಶಲ್ಯದ ಅಗತ್ಯವಿರುತ್ತದೆ. ಈಗಾಗಲೇ ಡೇಟಾ ಸೈನ್ಸಸ್‌ಗೆ ಸಾಕಷ್ಟು ಬೇಡಿಕೆ ಇದೆ. ಡೇಟಾ ಮತ್ತು ಅನಾಲಿಟಿಕ್ಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನದಲ್ಲಿರುವ ಈಕ್ವಿಫ್ಯಾಕ್ಸ್ ನೇಮಕಾತಿಗೆ ವೇದಿಕೆಯನ್ನು ಸೃಷ್ಟಿ ಮಾಡುತ್ತಿದೆಯಲ್ಲದೆ, ಉದ್ಯಮಕ್ಕೆ ಅಗತ್ಯವಾದ ರೀತಿ-ನೀತಿಗಳನ್ನು, ಪಠ್ಯಕ್ರಮಗಳನ್ನು ಅಳವಡಿಸಿ ಅದಕ್ಕೆ ಪೂರಕವಾದ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕೆಲಸ ಮಾಡಲಿದೆ.
ಮೂರು ಪ್ರಮುಖ ಅಂಶಗಳು: ಅನಾಲಿಟಿಕ್ಸ್ ಕ್ಷೇತ್ರದಲ್ಲಿ ಈಕ್ವಿಫ್ಯಾಕ್ಸ್ ಮೂರು ಪ್ರಮುಖ ಅಂಶಗಳಾದ ದೃಢವಾಡ ಮಾಹಿತಿ (ರೋಬಸ್ಟ್ ಡೇಟಾ), ವಿಶ್ಲೇಷಣೆಗಳು (ಅನಾಲಿಟಿಕ್ಸ್) ಮತ್ತು ಸುಧಾರಿತ ತಂತ್ರಜ್ಞಾನ (ಅಡ್ವಾನ್ಸ್‌ಡ್ ಟೆಕ್ನಾಲಜಿ)ವನ್ನು ವಾಣಿಜ್ಯೋದ್ಯಮಗಳಿಗೆ ಪೂರೈಕೆ ಮಾಡುತ್ತಿದೆ. ಈ ಕ್ರಿಯಾತ್ಮಕ ಒಳನೋಟಗಳ ಪೂರೈಕೆಯಿಂದ ಕಂಪನಿ ಗ್ರಾಹಕರನ್ನು ಸೆಳೆಯಲು, ಸಾಲ ವಿಸ್ತರಣೆ ಮಾಡಲು, ಸಾಲ ತಗ್ಗಿಸುವಿಕೆ, ವಂಚನೆ ತಪ್ಪಿಸಲು ಸಹಾಯಕವಾಗಲಿದೆ ಹಾಗೂ ನಿರ್ವಹಣೆ ಬಂಡವಾಳವನ್ನು ಉತ್ತಮಗೊಳಿಸುವಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸಲಿದೆ. ಆ ಮೂಲಕ ಬಿಎಫ್‌ಎಸ್‌ಐ ಅನಾಲಿಟಿಕ್ಸ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಪಡಿಸಿಕೊಳ್ಳಬಹುದಾಗಿದೆ ಹಾಗೂ ವಿಶೇಷ ಜ್ಞಾನವನ್ನು ಸಂಪಾದಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಣಿಪಾಲ್ ಗ್ಲೋಬಲ್ ಹಿರಿಯ ಅಧಿಕಾರಿ ಇದು 11 ತಿಂಗಳ ಪಿಜಿ ಡಿಪ್ಲೊಮಾ ವಸತಿ ಶಿಕ್ಷಣ ತರಬೇತಿಯಾಗಿದೆ. ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ತರಬೇತಿ ಪಡೆಯಬಹುದಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿ ವಾರಾಂತ್ಯದ ಪಾರ್ಟ್‌ಟೈಂ ಕೋರ್ಸ್ ತರಬೇತಿಯನ್ನು ವೃತ್ತಿಯಲ್ಲಿರುವವರು ಪಡೆಯಬಹುದಾಗಿದೆ ಎಂದು ತಿಳಿಸಿದರು.