Advertisement

ಸಮಾನತೆ ತತ್ವ ಗಟ್ಟಿಗೊಳ್ಳಲಿ: ಹೆಬ್ಟಾಳೆ

12:44 PM Jan 01, 2018 | Team Udayavani |

ಬೀದರ: ಹುಟ್ಟುವ ಮೊದಲ ಮನುಷ್ಯ ವಿಶ್ವಮಾನವ ನಾಗಿರುತ್ತಾನೆ. ಧರೆಗೆ ಬಂದೋಡನೆ ಜಾತಿ, ಧರ್ಮ ಎಂಬ ಪಾಶಕ್ಕೆ ಸಿಲುಕಿ ಒದ್ದಾಡಿ ತನ್ನ ಜೀವನ ಸಂಕುಚಿತಗೊಳಿಸಿಕೊಳ್ಳುತ್ತಿದ್ದಾನೆ. ಇಂತಹ ಜಂಜಡದಿಂದ ಮುಕ್ತಿ ಹೊಂದಿ ಮತ್ತೆ ವಿಶ್ವ ಮಾನವಿಯತೆ ಮೆರೆಯುವಂತೆ ರಾಷ್ಟ್ರೀಯ ಬುಡಕಟ್ಟು ಮತ್ತು ಕಲಾ ಪರಿಷತ್‌ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಕರೆ ನೀಡಿದರು.

Advertisement

ನಗರದ ಜಾನಪದ ಪ್ರಾದೇಶಿಕ ಕೇಂದ್ರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮಗಳು ನಮ್ಮ ಜೀವನಕ್ಕೆ ಮಾರಕವಾಗುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಭೌತಿಕ ಬೆಳವಣಿಗೆ ಮೇಲು ವ್ಯತಿರಿಕ್ತ
ಪರಿಣಾಮ ಬೀರುತ್ತದೆ. ಇಟ್ಟ ಗುರಿ, ದಿಟ್ಟ ಹೆಜ್ಜೆ ಸಹ ನಾಶವಾಗಿ ಇಡೀ ಬದುಕು ನಶ್ವರವಾಗುತ್ತದೆ. ಹಾಗಾಗಿ ಸಮಾನತೆ ತತ್ವ ಗಟ್ಟಿಗೊಳಿಸುವಂತೆ ಹೇಳಿದರು.

ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಕುವೆಂಪು ಅವರು ಹೇಳಿದಂತೆ ವಿಶ್ವಮಾನವ ಪರಿಕಲ್ಪನೆ ಸಾಕಾರಗೊಳ್ಳಲು ವರ್ಣಾಶ್ರಮ ಪದ್ಧತಿ ನಿಲ್ಲಬೇಕು. ಜಾತಿಯತೆ ಸಂಕೇತದಿಂದ ಗುರುತಿಸುವ ಪ್ರವರ್ತಿ ಬದಲಾಗಬೇಕು. ತಮ್ಮ ಜಾತಿ, ಧರ್ಮದವರು ಎಂದು ಹೇಳಿಕೊಂಡು ದಾರಿ ತಪ್ಪಿಸುವ ಹುನ್ನಾರ ಬುಡ ಸಮೇತ ಕಿತ್ತು ಹಾಕಬೇಕು ಎಂದು ಹೇಳಿದರು. 

ಪತ್ರಕರ್ತ ಶಿವಕುಮಾರ ಸ್ವಾಮಿ ಮಾತನಾಡಿ, ಯಾವ ದೇಶದ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ
ಕ್ಷೇತ್ರ ಸಂಪೂರ್ಣ ಜಾತಿ ರಹಿತವಾದಲ್ಲಿ ಆ ದೇಶ ಅಭಿವೃದ್ಧಿಪರ ದೇಶಗಳ ಪಟ್ಟಿಗೆ ಸೇರುತ್ತದೆ. ಆದರೆ ನಮ್ಮ ದೇಶದಲ್ಲಿ ಸಹಸ್ರ ಸಂಖ್ಯೆಯ ಜಾತಿ, ಉಪಜಾತಿಗಳು ನಮ್ಮ ಅಭಿವೃದ್ಧಿಗೆ ಮಾರಕವಾಗಿದ್ದು, ಒಂದು ದೇಶ, ಒಂದೇ ಧರ್ಮದ ಪರಿಕಲ್ಪನೆ ಎಲ್ಲಡೆ ಪಸರಿಸಲಿ ಎಂದು ಹೇಳಿದರು. ತತ್ವಪದಕಾರ ಈರಣ್ಣ ಕುಂಬಾರ ಕುವೆಂಪು ಅವರ ಭಾವಗೀತೆ ಹಾಡಿ ಜನಮನ ರಂಜಿಸಿದರು.

ಶಂಕರ ಚೊಂಡಿ ಜಾನಪದ ಗೀತೆ ಹಾಡಿದರು. ರಾಜಕುಮಾರ ಬಿದ್ರಿ, ಸುನಿತಾ ಹುಡೇರ್‌, ಜೀವರಾಜ, ಶ್ರೀಧರ ಜಾಧವ ಮತ್ತಿತರರು ಇದ್ದರು. ಉಪನ್ಯಾಸಕರಾದ ಸುರೇಶ ಯಾದವ ಸ್ವಾಗತಿಸಿದರು. ಶಿವಶರಣಪ್ಪ ಗಣೇಶಪುರ ನಿರೂಪಿಸಿದರು. ಲಿಂಗಪ್ಪ ಮಡಿವಾಳ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next