Advertisement

ಮಠ-ಮಾನ್ಯಗಳಿಂದ ಸಮಾನತೆ ಸಾಧ್ಯ: ರಾಯರಡ್ಡಿ

06:34 PM Mar 02, 2022 | Team Udayavani |

ಕುಕನೂರು: ಸಮಾಜದಲ್ಲಿ ಸಂಪ್ರದಾಯ, ಸತ್ಕಾರ್ಯ ಹಾಗೂ ಸಮಾನತೆ ಉಳಿದಿರುವುದು ಮಠ-ಮಾನ್ಯಗಳಿಂದ ಮಾತ್ರ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ತಾಲೂಕಿನ ಕುದರಿ ಮೋತಿ ಗ್ರಾಮದಲ್ಲಿನ ಜಗದ್ಗುರು ಸಂಸ್ಥಾನ ಮೈಸೂರುಮಠ ಜಾತ್ರಾ ಮಹೋತ್ಸವ ಹಾಗೂ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ
ಮಹಾಮಂಗಲೋತ್ಸವ ನಿಮಿತ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಠಾಧೀಶರು ಆಯಾ ಭಾಗದಲ್ಲಿ ವಿವಿಧ ಸಾಮಾಜಿಕ ಸೇವೆ, ಪುರಾಣ-ಪ್ರವಚನ, ಸಾರ್ವಜನಿಕ ಕಾರ್ಯಗಳಲ್ಲಿ ತೊಗಡಿಸಿಕೊಳ್ಳುವಂತೆ ಮಾಡಿ ಬಸವಾದಿ ಶರಣ ಹಾದಿಯನ್ನು ರೂಢಿಸುವ ಸತ್ಕಾರ್ಯಗಳ ಮಾಡುವ ಮೂಲಕ ಸಾಮಾಜಿಕ ವೇದಿಕೆಗಳಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ.

ಅಂತಹ ಸಂಪ್ರದಾಯದ ವೇದಿಕೆಗಳು ಒಂದು ರೀತಿಯ ಜಾಗೃತಿ ಮೂಡಿಸುವ ವಲಯಗಳಾಗಿ ಕಾರ್ಯನಿರ್ವಹಸುತ್ತಿರುವುದು ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯ ಎಂದರು. ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಸವರಾಜ ರಾಜೂರು ಮಾತನಾಡಿ, ಹೆತ್ತವರನ್ನು ಕೊನೆವರೆಗೂ ಗೌರವದಿಂದ ಕಾಣುತ್ತ ಜೊತೆಗೂಡಿಸಿಕೊಂಡು ಜೀವನ ನಡೆಸಿ ಎಂದು ಸಲಹೆ ನೀಡಿ ಹರಿಸಿದರು.

ಯುವ ಮುಖಂಡ ನವೀನ್‌ ಗುಳಗಣ್ಣನವರ್‌ ಮಾತನಾಡಿ, ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸಂಸ್ಥಾನ ಮೈಸೂರಮಠ ಭಾವೈಕ್ಯತೆ ಕೂಟವಾಗಿದ್ದು, ಇಂತಹ ಧರ್ಮಸ್ಥಳಗಲ್ಲಿ ವಿವಾಹಿತರಾದ ನವ ದಂಪತಿ ಮಾದರಿ ಜೀವನ ನಡೆಸಿ ಎಂದರು. ವಿಜಯ ಮಹಾಂತೇಶ್ವರ ಶಿವಾಚಾರ್ಯರ ಮಹಾಸ್ವಾಮಿಗಳು ನವ ಜೋಡಿಗೆ ಹರಿಸಿ, ಆಶೀರ್ವಚನ ನೀಡಿದರು.

ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಮುರುಡಿಮಠ, ಗವಿಸಿದ್ದೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಮುಖಂಡರಾದ ಶರಣಪ್ಪ
ಗೂಂಗಾಡಿ, ಗ್ರಾಪಂ ಅಧ್ಯಕ್ಷೆ ದುರಗವ್ವ, ಅಶೋಕ ತೋಟದ, ಕೊಟ್ಟರಪ್ಪ ಮುತ್ತಾಳ, ಬಸವರಾಜ ಉಳ್ಳಾಗಡ್ಡಿ, ಶಿವಶಂಕರ್‌ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್‌, ಮಹಾಂತೇಶ ಗಾಣಿಗೇರ, ವಿಜಯಕುಮಾರ ತಾಳಕೇರಿ, ಹನುಮೇಶ ಕಟ್ಟಿಮನಿ, ಗ್ರಾಮದ ಇನ್ನಿತರರಿದ್ದರು. ಮಂಜುನಾಥ ಗಟ್ಟೆಪ್ಪನವರ್‌ ಪ್ರಾಸ್ತಾವಿಕ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next