Advertisement

ಎಪ್ಸನ್‌ ಇಕೋ ಟ್ಯಾಂಕ್‌ ಪ್ರಿಂಟರ್‌ ಬಿಡುಗಡೆ

06:30 AM Feb 25, 2019 | |

ಬೆಂಗಳೂರು: ಡಿಜಿಟಲ್‌ ಇಮೇಜಿಂಗ್‌ ಮತ್ತು  ಪ್ರಿಂಟಿಂಗ್‌ ಸಲ್ಯೂಷನ್ಸ್‌ನ ಖ್ಯಾತ ಸಂಸ್ಥೆಯಾಗಿರುವ ಎಪ್ಸನ್‌ ಹೊಸ ಮೂರು ಮೊನೋಕ್ರೋಮ್‌ “ಇಕೋ ಟ್ಯಾಂಕ್‌ ಪ್ರಿಂಟರ್‌’ಗಳನ್ನು ಬಿಡುಗಡೆ ಮಾಡಿದೆ.

Advertisement

ಹೊಸ ಮಾದರಿಗಳಾದ ಎಂ1100, ಎಂ1120 ಹಾಗೂ ಎಂ2140 ಪ್ರಿಂಟರ್‌ಗಳು ಕಚೇರಿ ಪ್ರಿಂಟಿಂಗ್‌ ಮಾರುಕಟ್ಟೆ ಮತ್ತು ಮೊನೋ ಲೇಸರ್‌ ಪ್ರಿಂಟರ್‌ ಬಳಕೆದಾರರು ಎಪ್ಸನ್‌ ಇಕೋ ಟ್ಯಾಂಕ್‌ ಪ್ರಿಂಟರ್‌ಗಳಿಗೆ ಬದಲಾವಣೆ ಮಾಡಲು ಪ್ರೇರೇಪಣೆ ನೀಡುವ ವೈಶಿಷ್ಟಗಳನ್ನು ಹೊಂದಿವೆ.

ಇಕೋ ಟ್ಯಾಂಕ್‌ ಎಂ ಸರಣಿಯ ಪ್ರಿಂಟರ್‌ಗಳು ಒಂದು ಪ್ರಿಂಟ್‌ಗೆ ಮೂಲ ಟೋನರ್‌ನೊಂದಿಗೆ 2.74 ರೂ. ವೆಚ್ಚವಾಗಲಿರುವ ಮೊನೋ ಲೇಸರ್‌ ಪ್ರಿಂಟರ್‌ಗಳಿಗಿಂತ 23 ಪಟ್ಟು ಕಡಿಮೆ ವೆಚ್ಚದಲ್ಲಿ ಪ್ರಿಂಟ್‌ ನೀಡಲಿವೆ. ಅಲ್ಲದೆ, ಈ ಹೊಸ ಪ್ರಿಂಟರ್‌ಗಳನ್ನು ಪರಿಸರ ಸಂರಕ್ಷಣೆ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗಮದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

ಇದರ ರೀಫಿಲ್‌ ಬಾಟಲ್‌ ಅಲ್ಟ್ರಾ ಪೇಜ್‌ಗಳನ್ನು ನೀಡಲಿದ್ದು, 6000 ಪುಟಗಳವರೆಗೆ ಪ್ರಿಂಟ್‌ ಮಾಡಬಹುದಾಗಿದೆ. ವೈಫೈ ಡೈರೆಕ್ಟ್, ಶೀಘ್ರ ಪ್ರಿಂಟ್‌ ನೀಡುವ ವೇಗ ಮತ್ತು ಡ್ಯುಪ್ಲೆಕ್ಸ್‌ ಪ್ರಿಂಟಿಂಗ್‌ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ ಎಂದು ಎಪ್ಸನ್‌ ಇಂಡಿಯಾ ಇಂಕ್‌ಜೆಟ್‌ ಪ್ರಿಂಟರ್ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next