Advertisement

ಪುರಾಣ ಪ್ರವಚನಗಳು ಹೆಚ್ಚು ಪ್ರಸ್ತುತ; ಗುರುಸಿದ್ಧೇಶ್ವರ ಸ್ವಾಮೀಜಿ

03:51 PM Sep 03, 2022 | Team Udayavani |

ರಬಕವಿ-ಬನಹಟ್ಟಿ: ಇಂದಿನ ಆಧುನಿಕತೆಯ ದಿನಗಳಲ್ಲಿ ಪುರಾಣ ಮತ್ತು ಪ್ರವಚನಗಳು ಹೆಚ್ಚು ಪ್ರಸ್ತುತವಾಗಿವೆ. ಪವಿತ್ರ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳುವ ಈ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು. ಇದರಿಂದ ನಾವು ಧರ್ಮ, ಸಂಸ್ಕೃತಿ, ಮಹಾತ್ಮರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಬ್ರಹ್ಮಾನಂದ ಆಶ್ರಮದಲ್ಲಿ ಅಥಣಿಯ ಶಿವಯೋಗಿಗಳ ಕುರಿತು ಹಮ್ಮಿಕೊಂಡ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದ ಕಡೆಗೆ ಜನರು ಹರಿದು ಬರುತ್ತಿದ್ದರೋ ಅದೇ ರೀತಿ ಅಥಣಿಯ ಶಿವಯೋಗಿಗಳ ಕಾಲದಲ್ಲಿ ಅನೇಕ ಮಹನಿಯರು ಬರುತ್ತಿದ್ದರು. ಇಂಥ ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ಮತ್ತು ಓದುವುದರಿಂದ ಜೀವನ ಪಾವನವಾಗುತ್ತದೆ ಎಂದು ಗುರುಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಕಲಾವಿದ ಮಹಾದೇವ ಕವಿಶೆಟ್ಟಿ ಮಾತನಾಡಿ, ಜನರು ಪುರಾಣ, ಪ್ರವಚನ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುವುದರ ಜೊತೆಗೆ ದಾರಿದ್ರ್ಯ ಮತ್ತು ಪಾಪಗಳಿಂದ ಮುಕ್ತರಾಗುತ್ತಾರೆ ಎಂದರು. ಈ ಸಂದರ್ಭದಲ್ಲಿ ಹೊಸೂರಿನ ಪರಮಾನಂದ ಸ್ವಾಮೀಜಿ, ಶ್ರೀದೇವಿ ಪರಮಶೆಟ್ಟಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿಯವರನ್ನು ಟ್ರಸ್ಟ್‌ ಸದಸ್ಯರು ಸನ್ಮಾನಿಸಿದರು. ಪ್ರಭುಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು. ಗಿರೀಶ ಮುತ್ತೂರ ಕಾರ್ಯಕ್ರಮ ನಡೆಸಿಕೊಟ್ಟರು. ವಿರೂಪಾಕ್ಷಯ್ಯ ಹಿರೇಮಠ ವಂದಿಸಿದರು.

Advertisement

ಬುದ್ದಪ್ಪ ಕುಂದಗೋಳ, ಮುರಿಗೆಪ್ಪ ಮಿರ್ಜಿ, ಅರವಿಂದ ವ್ಯಾಸ, ರಾಮಣ್ಣ ಕುಲಗೋಡ, ಮಹಾದೇವ ಕೋಟ್ಯಾಳ, ಉದಯ ಜಿಗಜಿನ್ನಿ, ಮಾರುತಿ ಗಂಥಡೆ ಸೇರಿದಂತೆ ಸಂಶಿ, ಶಿರೂರ, ಅದರಗುಂಜಿ, ಬೀರುವಳ್ಳಿ, ರಬಕವಿ, ರಾಮಪುರ ಮತ್ತು ತೇರದಾಳದಿಂದ ಆಗಮಿಸಿದ ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next