Advertisement

ಅಧಿಕ ವೇತನದಾರರಿಗೂ ಕಾರ್ಮಿಕರ ಭವಿಷ್ಯ ನಿಧಿ ಪಿಂಚಣಿ ?

02:10 AM Feb 21, 2022 | Team Udayavani |

ಹೊಸದಿಲ್ಲಿ: ಮಾಸಿಕ 15 ಸಾವಿರ ರೂ.ಗಳಿಗಿಂತ ಹೆಚ್ಚು ಮೂಲ ವೇತನ ಹೊಂದಿದ್ದು, ಕಾರ್ಮಿಕರ ಭವಿಷ್ಯ ನಿಧಿ ಯೋಜನೆ 1995ರಡಿ ಪಿಂಚಣಿ ಯೋಜನೆ ಕಡ್ಡಾಯವಲ್ಲದ ಸಂಘಟಿತ ಕ್ಷೇತ್ರದ ನೌಕರರಿಗಾಗಿ ಹೊಸ ಪಿಂಚಣಿ ಯೋಜನೆಯೊಂದನ್ನು ಜಾರಿಗೊಳಿಸಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಚಿಂತನೆ ನಡೆಸುತ್ತಿದೆ.

Advertisement

ಪ್ರಸ್ತುತ 15 ಸಾವಿರ ರೂ.ಗಳಿಗಿಂತ ಕಡಿಮೆ ವೇತನ ಹೊಂದಿರುವವರು ಮಾತ್ರ ಇಪಿಎಫ್ಒ ಪಿಂಚಣಿ ಯೋಜನೆಯಡಿ ಬರುತ್ತಾರೆ.

ಈ ಪ್ರಸ್ತಾವ ಮಾ. 11ರಂದು ಗುವಾಹಟಿಯಲ್ಲಿ ನಡೆಯಲಿರುವ ಇಪಿಎಫ್ಒದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:ಬ್ರಿಟನ್‌ ರಾಣಿ ಎರಡನೇ ಎಲಿಝಬೆತ್‌ಗೆ ಕೋವಿಡ್‌ ಸೋಂಕು ದೃಢ

Advertisement

Udayavani is now on Telegram. Click here to join our channel and stay updated with the latest news.

Next