Advertisement

ಠೇವಣಿ ಮೇಲಿನ ಬಡ್ಡಿದರ 0.15% ರಷ್ಟು ಇಳಿಸಿದ EPFO

09:59 AM Mar 06, 2020 | sudhir |

ನವದೆಹಲಿ: ಇಪಿಎಫ್‌ಒ(EPFO) ಬಡ್ಡಿದರಗಳನ್ನು ಕಡಿತಗೊಳಿಸಿದ್ದು,ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಏಳು ವರ್ಷಗಳಲ್ಲಿ ಕಡಿಮೆ ಎನ್ನಲಾದ ಶೇ. 8. 5 ರಷ್ಟು ಪಾವತಿಸಲು ಇಪಿಎಫ್ ಒ ನಿರ್ಧರಿಸಿದೆ. 2018-19ರಲ್ಲಿ ಶೇ. 8. 65 ರಷ್ಟು ಬಡ್ಡಿದರವನ್ನು ಸುಮಾರು ಆರು ಕೋಟಿ ಗ್ರಾಹಕರಿಗೆ ಇಪಿಎಫ್ ಒ ಪಾವತಿಸಿತ್ತು.. 2019-20ರ ಹಣಕಾಸು ವರ್ಷಕ್ಕೆ ಬಡ್ಡಿದರಗಳನ್ನು ಶೇಕಡಾ 8.50 ಕ್ಕೆ ಇಳಿಸಲು ಕೇಂದ್ರೀಯ ಟ್ರಸ್ಟಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿಬಿಟಿಯನ್ನು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ನೇತೃತ್ವ ವಹಿಸಿದ್ದರು.

Advertisement

ಗಮನಾರ್ಹವಾಗಿ ಪಿಎಫ್ ಮೇಲಿನ ಬಡ್ಡಿದರಗಳನ್ನು ಕೇಂದ್ರೀಯ ಟ್ರಸ್ಟಿಗಳ ಮಂಡಳಿ ನಿರ್ಧರಿಸಲಿದೆ. ಇದರ ನಂತರ ಅದನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.

ಕಳೆದ ಹಣಕಾಸು ವರ್ಷದಲ್ಲಿ, ನಿಮ್ಮ ಪಿಎಫ್ ಖಾತೆಯ ಮೇಲಿನ ಬಡ್ಡಿ ಶೇಕಡಾ 8.65 ರಷ್ಟಿತ್ತು. ಈಗ ಅದನ್ನು ಶೇಕಡಾ 8.50 ಕ್ಕೆ ಇಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next