Advertisement

EPFO;ಜನನ ದಿನಾಂಕಕ್ಕೆ ಆಧಾರ್‌ ಕಾರ್ಡ್‌ ದಾಖಲೆಯಲ್ಲ! ;ಅದು ಗುರುತಿನ ದೃಢೀಕರಣವಷ್ಟೆ

01:13 AM Jan 19, 2024 | Team Udayavani |

ಹೊಸದಿಲ್ಲಿ: ಜನನ ದಿನಾಂಕದ ದಾಖಲೆಯಾಗಿ ಇನ್ನು ಮುಂದೆ ಆಧಾರ್‌ ಕಾರ್ಡ್‌ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಗುರುವಾರ ಸ್ಪಷ್ಟಪಡಿಸಿದೆ.

Advertisement

ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ(ಯುಐಡಿಐಎ)ದ ನಿರ್ದೇಶನದ ಅನ್ವಯ ಈ ನಿರ್ಧಾರ ಕೈಗೊಂಡಿರುವುದಾಗಿ ಇಪಿಎಫ್ಒ ತಿಳಿಸಿದೆ. ಜತೆಗೆ, ಜನನ ದಿನಾಂಕದ ತಿದ್ದುಪಡಿಗೆ ಸ್ವೀಕಾರಾರ್ಹವಾದ ದಾಖಲೆಗಳ (ಪ್ರೂಫ್) ಪಟ್ಟಿಯಿಂದ ಆಧಾರ್‌ ಕಾರ್ಡ್‌ ಅನ್ನು ತೆಗೆದುಹಾಕಲಾಗಿದೆ.

ಆಧಾರ್‌ ಸಂಖ್ಯೆಯನ್ನು ಒಬ್ಬ ವ್ಯಕ್ತಿಯ ಗುರುತನ್ನು ದೃಢಪಡಿಸುವ ಉದ್ದೇಶದಿಂದ ನೀಡಲಾಗಿದೆಯೇ ವಿನಾ ಅದು ಆತನ ಜನನ ದಿನಾಂಕಕ್ಕೆ ಪುರಾವೆಯಾಗಲ್ಲ ಎಂದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಯುಐಡಿಐಎ ಸುತ್ತೋಲೆ ಹೊರಡಿಸಿತ್ತು.

ಜನನ ದಿನಾಂಕಕ್ಕೆ ಏನೇನು ದಾಖಲೆ ನೀಡಬಹುದು?

ಶಾಲಾ ವರ್ಗಾವಣೆ ಪ್ರಮಾಣಪತ್ರ

Advertisement

ಪ್ಯಾನ್‌ ಕಾರ್ಡ್‌

ಕೇಂದ್ರ/ರಾಜ್ಯ ಪಿಂಚಣಿ ಪಾವತಿ ಆದೇಶ

ಸರಕಾರ ನೀಡಿರುವ ವಾಸ್ತವ್ಯ ಪ್ರಮಾಣಪತ್ರ

ಪಾಸ್‌ಪೋರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next