Advertisement

ಐಸಿಸಿ ವಿಶ್ವ ಇಲೆವೆನ್‌ ಕ್ರಿಕೆಟ್‌ ತಂಡಕ್ಕೆ ಮಾರ್ಗನ್‌ ನಾಯಕ

06:00 AM Mar 24, 2018 | |

ಲಂಡನ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಮೇ 31ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಸಹಾಯಾರ್ಥ ಟಿ20 ಪಂದ್ಯದಲ್ಲಿ ಐಸಿಸಿ ವಿಶ್ವ ಇಲೆವೆನ್‌ ತಂಡವನ್ನು ಮುನ್ನಡೆಸುವ ಅವಕಾಶ ಇಂಗ್ಲೆಂಡ್‌ ಕ್ರಿಕೆಟಿಗ ಎವೋನ್‌ ಮಾರ್ಗನ್‌ ಅವರಿಗೆ ಲಭಿಸಿದೆ.  ಇರ್ಮಾ ಮತ್ತು ಮರಿಯಾ ಚಂಡಮಾರುತಗಳಿಂದ ತೀವ್ರ ಹಾನಿಗೊಳಗಾದ ಕೆರಿಬಿಯನ್‌ ದ್ವೀಪದ 2 ಸ್ಟೇಡಿಯಂಗಳನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ಈ ಪಂದ್ಯವನ್ನು ಆಡಲಾಗುತ್ತಿದೆ. 

Advertisement

ಆಂಗ್ವಿಲ್ಲಾದ “ರೊನಾಲ್ಡ್‌ ವೆಬ್‌ಸ್ಟರ್‌ ಪಾರ್ಕ್‌’ ಮತ್ತು ಡೊಮಿನಿಕಾದ “ವಿಂಡ್ಸರ್‌ ಪಾರ್ಕ್‌ ಸ್ಟೇಡಿಯಂ’ ಈ ಚಂಡಮಾರುತಗಳ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದವು. ಈ ಪಂದ್ಯಕ್ಕೆ ಐಸಿಸಿ ಅಂತಾರಾಷ್ಟ್ರೀಯ ಮಾನ್ಯತೆ ನೀಡಿದ್ದು, ನೇರ ಪ್ರಸಾರ ಕಾಣಲಿದೆ. ವಿಶ್ವ ಇಲೆವೆನ್‌ ತಂಡವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next