Advertisement

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಲು ಇಒ ಸಲಹೆ

12:35 PM May 05, 2019 | Suhan S |

ಪಾಂಡವಪುರ: ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯ ಎಂದು ತಾಪಂ ಇಒ ಮುನಿರಾಜು ಹೇಳಿದರು.

Advertisement

ಪಟ್ಟಣದ ಕೃಷ್ಣಾನಗರದಲ್ಲಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಮಗಳೂರಿನ ಬಾಲ ಭವನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಿದ್ದ ‘ಮಕ್ಕಳ ಬೇಸಿಗೆ ಶಿಬಿರ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಪ್ರಜೆ ಗಳಾಗಿ ರೂಪಿಸಿ: ಮಕ್ಕಳದ್ದು ಮುಗ್ದ ಮನಸ್ಸು. ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಒಳ್ಳೆಯದನ್ನು ಕಲಿಸಿದರೆ ಮುಂದೆ ಉತ್ತಮ ಪ್ರಜೆಗಳಾಗುತ್ತಾರೆ. ಇಲ್ಲದಿದ್ದರೆ ಮಕ್ಕಳು ಕೆಟ್ಟ ಹಾದಿ ತುಳಿಯುವರು. ಹೀಗಾಗಿ ಬೇಸಿಗೆ ರಜೆಗಳಲ್ಲಿ ಅವರನ್ನು ಮನೆಯಲ್ಲಿ ಹಿಡಿದಿಟ್ಟುಕೊಳ್ಳುವುದು ದುಸ್ಸಾಹಸವೇ ಸರಿ. ಜತೆಗೆ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಕಲಿತದನ್ನು ದೊಡ್ಡವರಾದರೂ ಬಿಡುವುದಿಲ್ಲ. ಆದ್ದರಿಂದ ಅವರನ್ನು ಬಾಲ್ಯದಲ್ಲಿ ತಿದ್ದಿ ಬೆಳೆಸಿದರೆ ಮುಂದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವ ಜತೆಗೆ ಸತ್ಪ್ರಜೆ ಗಳಾಗುತ್ತಾರೆ. ಜತೆಗೆ ಪೋಷಕರು ಮಕ್ಕಳಿಗೆ ಮೊಬೈಲ್ ನೀಡದೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಶಿಬಿರಗಳಲ್ಲಿ ಸೇರಿಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾಂಡವಪುರ ಮೇಲ್ವಿಚಾರಕಿ ಭಾಗ್ಯಮ್ಮ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಿವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಲ್ಲಿ ಸೇರಿಸಬೇಕು. ಶಿಬಿರಗಳಲ್ಲಿ ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಅನಾವರಣಕ್ಕೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಾಗೆಂದು ದುಬಾರಿ ಶುಲ್ಕ ತೆತ್ತು, ಅದಕ್ಕೂ ಒಂದು ಸಾಲ ಮಾಡಬೇಕಿಲ್ಲ. ಬದಲಾಗಿ ಸರ್ಕಾರವೇ ಮಕ್ಕಳಿಗೆ ಬೇಸಿಗೆ ಶಿಬಿ ರಗಳನ್ನೂ ಆಯೋಜಿಸುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಝಕೀಯಾಭಾನು, ಸಿಬ್ಬಂದಿಗಳಾದ ಅನುಪಮಾ, ರೇವತಿ, ಪ್ರವೀಣ್‌, ಕಾರ್ತೀಕ್‌, ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಕುಮಾರ್‌, ಮೇರಿ, ಸಂಪನ್ಮೂಲ ವ್ಯಕ್ತಿಗಳಾದ ನೃತ್ಯ ಶಿಕ್ಷಕ ದರಸಗುಪ್ಪೆ ಮುರಳಿ, ಸೌಮ್ಯ, ಅರ್ಪಿತಾ ಇತರರಿದ್ದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next