ಋಣವ ತೀರಿಸುತ ಜಗದಾದಿ ತತ್ತ್ವವನು
ಜನದಿ ಕಾಣುತ್ತಿದರೊಳ್ ಒಂದಗೂಡಲು ಬೇಕು|
ಮನೆಯೊಳಗೆ ಮಠ ನಿನಗೆ -ಮಂಕುತಿಮ್ಮ
Advertisement
ಇತ್ತೀಚಿನ ದಿನಗಳಲ್ಲಿ ಮಾನವನು ಪ್ರಕೃತಿ ಮತ್ತು ಪರಿಸರ ಸಂಬಂಧಗಳ ಎಲ್ಲ ತಂತುಗಳು ಕಳಚಿಕೊಂಡಿವೆ. ಇದರ ಪರಿಣಾಮವಾಗಿ ನಿಸರ್ಗದ ರೂಪ, ಸತ್ವ, ತತ್ತ್ವಗಳು ಸಮಗ್ರವಾಗಿ ಉತ್ಕಟ ಸ್ಥಿತಿಯನ್ನು ತಲುಪಿ ವಿರೂಪಗೊಳ್ಳುತ್ತಿವೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಮಾನವನ ಇಂದಿನ ತತ್ತ್ವ ಪ್ರಣಾಳಿಕೆಗಳು, ವ್ಯವಸ್ಥಾಪನ ರೀತಿ-ನೀತಿಗಳು ಸಂಘ-ಸಂಸ್ಥೆಗಳು, ಸಾಧನೋದ್ದೇಶಗಳು ಮತ್ತು ಪ್ರಬಲ, ಪ್ರಚೋದನೆಗಳು ಆದ್ಯಂತವಾಗಿ ಪುನರ್ ವಿಮರ್ಶೆಗೊಳ್ಳುವುದು ತತ್‌ಕ್ಷಣದ ಕರ್ತವ್ಯವೆನಿಸುತ್ತದೆ. ಪ್ರಕೃತಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಾನವನು ತನ್ನ ಕರುಳ ಬಳ್ಳಿಯನ್ನೇ ಕಡಿದುಕೊಳ್ಳಲು ಯತ್ನಿಸುತ್ತಿರುವಂತಿದೆ. ಈ ರೀತಿಯಾಗಿ ಪ್ರಕೃತಿಯಿಂದ ದೂರವಾಗುತ್ತಿರುವುದು ಪ್ರಕೃತಿಗಿಂತಲು ಮಿಗಿಲಾಗಿ ಮಾನವನಿಗೇ ಮಾರಕ ಎಂಬ ಸತ್ಯವನ್ನು ಮರೆತು ಬಿಟ್ಟಿದ್ದಾನೆ.
Related Articles
ಮಾನವನಿಗೊ ಪ್ರಕೃತಿಗೂ ನಡುವೆ ಇರುವ ಅನೂಹ್ಯ ಸಂಬಂಧ ವನ್ನು ನಾವು ಹಾಗೆ ಉಳಿಸಿಕೊಳ್ಳಬೇ ಕಿದೆ. ನಾವು ಮಾಡಬೇಕಾಗಿರುವ ಕೆಲಸಗಳಿಷ್ಟೇ ನಮ್ಮ ನಮ್ಮ ಕೈಯಲ್ಲಿ ಆಗುವ ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡು ಹೋಗುವುದು. ತ್ಯಾಜವಸ್ತುಗಳ ನಿರ್ವಹಣೆ,ಪ್ಲಾಸ್ಟಿಕ್ ನಿರ್ವಹಣೆ, ಗಾಳಿ, ನೀರು, ಬೆಳಕುಗಳನ್ನು ಶುದ್ದವಾಗಿಟ್ಟುಕೊಳ್ಳಬೇಕು. ಪ್ರಕೃತಿ ಮಾತೆಯ ಮಡಿಲಲ್ಲಿ ಅದರ ನೈಜ ಸ್ಥಿತಿಗೆ ಅದು ಪುನಃ ಮರುಕಳಿಸುವಂತೆ ಮಾಡುವುದು. ನಮ್ಮ ಪರಿಸರವನ್ನು ಕಾಪಾಡಿಕೊಳ್ಳುವುದು. ಇದಕ್ಕಾಗಿ ಮುಂಜಾಗ್ರತೆ ವಹಿಸಬೇಕಿದೆ.
Advertisement
ಮಧುರಾ ಎಲ್. ಭಟ್, ಎಸ್. ಡಿ. ಎಂ ಕಾಲೇಜು, ಉಜಿರೆ