ಬೀದರ: ಪ್ರತಿಯೊಂದು ಜೀವಿ ಬದುಕಿಗೆ ಶುದ್ಧ ಗಾಳಿ ಅಗತ್ಯ. ಆದರೆ, ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನೈರ್ಮಲ್ಯ ಮಾಡಿ ಪ್ರಕೃತಿ ವಿರುದ್ಧ ಸಾಗಿದ್ದಾನೆ. ಜೀವಸಂಕುಲ ಮತ್ತು ಮಾನವ ಕುಲ ಉಳಿಬೇಕಾದರೆ ಪರಿಸರ ಸಂರಕ್ಷಣೆಯಿಂದ ಮಾತ್ರ ಸಾಧ್ಯ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿದರು.
ನಗರದ ಆರ್‌ಟಿಒ ಕಚೇರಿಯಲ್ಲಿ ಸಾರಿಗೆ ಇಲಾಖೆ ಮತ್ತು ಭಾಗ್ಯವಂತಿ ಮೋಟಾರ್ ಡ್ರೆçವಿಂಗ್ ಸ್ಕೂಲ್ ಆಶ್ರಯದಲ್ಲಿ ಏರ್ಪಡಿಸಿದ್ದ ವಾಯು ಮಾಲಿನ್ಯ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಾಲಕರು ತಮ್ಮ ವಾಹನಗಳಿಗೆ ಸರಿಯಾದ ಸಮಯಕ್ಕೆ ಇಂಜಿನ್ ಆಯಿಲ್, ಸೇರಿದಂತೆ ಇತರೆ ಸರ್ವಿಸ್ ಮಾಡುತ್ತಿರಬೇಕು. ಇದರಿಂದ ಪರಿಸರಕ್ಕೆ ಆಗುವ ಹಾನಿ ತಪ್ಪಿಸಬಹುದು ಎಂದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕ ಸಾಯಿಪ್ರಸಾದ ಮಾತನಾಡಿ, ಪರಿಸರ ನೈರ್ಮಲ್ಯ ರಕ್ಷಣೆಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಕಾಡು ಬೆಳೆಸುವುದು, ರಸ್ತೆ ಬದಿಗಳಲ್ಲಿ ಸಸಿ ನೆಡುತ್ತಾರೆ. ಆದರೂ ಕಾಡಿನಲ್ಲಿ ಕಾಡ್ಗಿಚ್ಚು, ಇನ್ನಾವುದರ ಕಾರಣದಿಂದ ಬೆಂಕಿ ಹೊತ್ತುರಿದು ಪರಿಸರ ನಾಶವಾಗುವಂತಹ ಘಟನೆಗಳು ನಡೆಯುತ್ತಿವೆ. ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಪ್ರಾಂಶುಪಾಲ ಶಿವರಾಜ ಜಮಾದಾರ ಮಾತನಾಡಿ, ಸಂಚಾರಿ ನಿಯಮ ಪಾಲಿಸಿ, ಅಪಘಾತ ತಡೆಯಬೇಕು. 18 ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಬೈಕ್ ಚಲಾಯಿಸಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ಬಿರಯಾನಿ ಖಾಜಾ ಬಾಷಾ, ಸಿಬ್ಬಂದಿಗಳಾದ ವೀರೇಂದ್ರ ಮೇತ್ರೆ, ವಿಶ್ವನಾಥ ಎಂ. ನಾಗೇಶ, ಅಮನೂನ್, ವೀರಣ್ಣ, ಅನಂತ ಕೆ.ಎಸ್ ಸೇರಿದಂತೆ ಇತರರು ಇದ್ದರು.