ಬೆಳ್ಮಣ್: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲೇ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರ ನಡೆಯಬೇಕಾಗಿದೆ ಎಂದು ಬೆಳ್ಮಣ್ ಉಪ ವಲಯ ಅರಣ್ಯಾ ಧಿಕಾರಿ ಪ್ರಕಾಶ್ಚಂದ್ರ ಹೇಳಿದರು.
ಅವರು ಸೋಮವಾರ ನಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಬೋರ್ಡು ಶಾಲೆ)ಯಲ್ಲಿ ನಡೆದ ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ಸಸಿಗಳ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯವಾದಿ ಬೆಳ್ಮಣ್ ಸರ್ವಜ್ಞ ತಂತ್ರಿ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳ್ಮಣ್ ಜೂನಿಯರ್ ಜೇಸಿ, ವಿಕಾಸ್ ಭಾರತ್ ಟ್ರಸ್ಟ್ , ಅರಣ್ಯ ಇಲಾಖೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅದಾನಿ ಸಂಸ್ಥೆಯ ಸಿಬಂದಿ ವಿನೀತ್ ಅಂಚನ್ ವಿಕಾಸ್ ಭಾರತ್ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಇನ್ನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಮಾರ್ ನಂದಳಿಕೆ, ಜೂನಿಯರ್ ಜೇಸಿ ಅಧ್ಯಕ್ಷ ದೀಕ್ಷಿತ್ ದೇವಾಡಿಗ, ಅರಣ್ಯಾ ಧಿಕಾರಿಗಳಾದ ಭಾಸ್ಕರ್, ಗಣೇಶ್, ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ವಿದ್ಯಾರ್ಥಿಗಳು, ಶಿಕ್ಷಕರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿತ್ಯಾನಂದ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಸಿರಲ್ಲಿ ನಮ್ಮ ಉಸಿರು ತುಂಬಿದೆ
ಸೃಷ್ಟಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮನಗಂಡು ಮುಂದಿನ ಪೀಳಿಗೆಗೆ ಸ್ವತ್ಛ, ಆರೊಗ್ಯ ಪೂರ್ಣ ಪರಿಸರವನ್ನು ಬಳುವಳಿಯಾಗಿ ನೀಡುತ್ತೇವೆ ಎಂಬ ಪ್ರತಿಜ್ಞೆಯನ್ನು ಎಲ್ಲರು ಕೈಗೊಂಡಾಗ ಹಸಿರಲ್ಲಿ ನಮ್ಮ ಉಸಿರು ತುಂಬಿದೆ ಎಂಬ ಧ್ಯೇಯವಾಕ್ಯ ಹೆಚ್ಚು ಅರ್ಥಪೂರ್ಣವಾಗಬಹುದು.
-ಬೆಳ್ಮಣ್ ಸರ್ವಜ್ಞ ತಂತ್ರಿ, ನ್ಯಾಯವಾದಿ