Advertisement

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ

11:22 AM Jun 10, 2018 | Team Udayavani |

ಬಸವಕಲ್ಯಾಣ: ಆರೋಗ್ಯಪೂರ್ಣ ಬದುಕಿಗೆ ಬೇಕಿರುವ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ಯಾತನೂರ ಹೇಳಿದರು.

Advertisement

ನಗರದ ಸ್ಮಾರ್ಟ್‌ಕಿಡ್ಸ್‌ ಪಬ್ಲಿಕ್‌ ಶಾಲೆಯ ನೂತನ ಕಟ್ಟಡ ಆವರಣದಲ್ಲಿ ಪರಿಸರ ದಿನಾಚಣೆ ನಿಮಿತ್ತ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಲ್ಲಿ ಪರಿಸರ ಪ್ರೀತಿ ಕಡಿಮೆಯಾಗುತ್ತಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮನುಷ್ಯನ ಅತಿಯಾದ ಆಸೆ, ಆಧುನಿಕ ಜೀವನ ಪದ್ಧತಿಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ
ಶಿಕ್ಷಣ, ಉತ್ತಮ ಸಂಸ್ಕಾರದ ಜತೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಕೆಲಸ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಡೆಯಬೇಕು. ಶಾಲೆ ಮತ್ತು ಮನೆ ಸುತ್ತಲಿನ ಪರಿಸರವನ್ನು ಸ್ವತ್ಛ ಮತ್ತು ಶುದ್ಧವಾಗಿಟ್ಟುಕೊಳ್ಳುವಲ್ಲಿ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕು. ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಕಾಳಜಿಯಿಂದ ಪೋಷಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯೆ ನಿರ್ಮಲಾ ಶೆಟಗಾರ ಮಾತನಾಡಿ, ಪರಿಸರ ನಾಶವಾದಲ್ಲಿ ಜೀವ ಸಂಕುಲಕ್ಕೆ ಅಪಾಯ ಕಟಿಟ್ಟ ಬುತ್ತಿ.
ಪರಿಸರ ನಾಶಕ್ಕೆ ಮಾನವನೇ ಮೂಲ ಕಾರಣ. ಮನುಷ್ಯನನ್ನು ಹೊರತುಪಡಿಸಿ ಬೇರೆ ಯಾವುದೇ ಜೀವಿ ಪರಿಸರ ಹಾಳು ಮಾಡುತ್ತಿಲ್ಲ. ಮಾನವ ಸೌಲಭ್ಯಗಳಲ್ಲಿನ ಹಪಾ ಹಪಿತನದಿಂದ ಪ್ರಕೃತಿಯ ಮೇಲೆ ಸಾಕಷ್ಟು ಒತ್ತಡ ಸೃಷ್ಟಿಯಾಗುತ್ತಿದೆ. ಆದ್ದರಿಂದ ಜೀವನಕ್ಕೆ ಅವಶ್ಯವಾದ ಉತ್ತಮ ಪರಿಸರ ಸಂರಕ್ಷಿಸುವ ಅಗತ್ಯವಿದೆ ಎಂದರು.

ಶಾಲಾ ಆಡಳಿತ ಅಧಿಕಾರಿ ಸಂಜೀವಕುಮಾರ ರಾಜೋಳೆ ಮಾತನಾಡಿ, ಪರಿಸರ ಸಂಪತ್ತಿನ ಬಗ್ಗೆ ಎಲ್ಲರು ಕಾಳಜಿ
ವಹಿಸಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಹಸಿರೀಕರಣಕ್ಕೆ ನೆರವಾಗಬೇಕು. ಆಗ ಮಾತ್ರ ಎಲ್ಲರಿಗೂ ಉತ್ತಮ ಗಾಳಿ, ಆರೋಗ್ಯ ಸಿಗುತ್ತದೆ. ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಯುತ್ತದೆ ಎಂದರು. ಶಾಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಚನ್ನಬಸಪ್ಪಾ ಜಯಪ್ಪಾ, ಡಾ| ಯುವರಾಜ ಬಿರಾದಾರ, ಶಾಲೆಯ ಶಿಕ್ಷಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next