Advertisement

ಮಾದರಿಯಾದ ಅಗ್ನಿಶಾಮಕ ದಳ ಸಿಬ್ಬಂದಿ ಹಸಿರು ಪ್ರೇಮ

06:05 PM Oct 16, 2020 | Suhan S |

ಸಿರುಗುಪ್ಪ: ನಗರದಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ದಳದ ಸಿಬ್ಬಂದಿಯು ಯಾವುದೇ ದುಡ್ಡಿನ ಖರ್ಚು ವೆಚ್ಚವಿಲ್ಲದೆ ತಮ್ಮ ಠಾಣೆಯಲ್ಲಿ ಗಿಡಮರಗಳನ್ನು ಪೋಷಿಸುತ್ತಿದ್ದು, ಠಾಣೆಯಸುತ್ತಮುತ್ತ ಅನೇಕ ರೀತಿಯ ಗಿಡಮರಗಳು ನಳನಳಿಸುತ್ತಿವೆ.

Advertisement

ಪ್ಲಾಸ್ಟಿಕ್‌ ಲೋಟಗಳು, ಇರುವೆ ಹುತ್ತಿನ ಮಣ್ಣು, ಪಾರಿವಾಳ ಗೊಬ್ಬರ ಮತ್ತು ತಮ್ಮಲ್ಲಿ ದೊರೆಯುವ ಪ್ಲಾಂಟೇಷನ್‌ ಗಿಡಗಳನ್ನು ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ಬೆಳೆಸಿ ಠಾಣೆಯ ಆವರಣದಲ್ಲಿ ನೆಡುವ ಕಾರ್ಯವನ್ನು ಇಲ್ಲಿನ ಸಿಬ್ಬಂದಿ ಮಾಡಿ ಸ್ಥಳೀಯರಮೆಚ್ಚುಗೆಗೆ ಕಾರಣರಾಗಿದ್ದಾರೆ. ಮದರ್‌ ಟ್ರೀ, ಕುಟ್ರನ್‌, ದಾಸವಾಳ, ಕ್ಯಾಟ್‌ಐ, ಪಪ್ಪಾಯ, ಕಣಗಲ, ಬಾದಾಮಿ,ನುಗ್ಗೆ ಮತ್ತು ಉದ್ಯಾನವನದ ಅಲಂಕಾರಿಕ ಬಳ್ಳಿಗಳನ್ನು ನಿರುಪಯುಕ್ತ ಪ್ಲಾಸ್ಟಿಕ್‌ ಲೋಟಗಳಲ್ಲಿಕರಿ ಇರುವೆಗಳು ಭೂಮಿಯಿಂದ ಹೊರಹಾಕಿದ ಮಣ್ಣು ಮತ್ತು ಪಾರಿವಾಳಗಳು ಹಾಕಿದ ಹಿಕ್ಕೆಯ ಗೊಬ್ಬರವನ್ನು ಮಣ್ಣಿನೊಂದಿಗೆ ಬೆರೆಸಿ ತುಂಬಿವಿವಿಧ ಜಾತಿಯ ಗಿಡ ಮತ್ತು ಬಳ್ಳಿಗಳನ್ನು ಇಲ್ಲಿನ ಸಿಬ್ಬಂದಿಯು ಕಾಳಜಿಯಿಂದ ಬೆಳೆಸಲು ಮುಂದಾಗಿದ್ದಾರೆ.

ತಮ್ಮಲ್ಲಿಯೇ ಬೆಳೆದ ಅಲಂಕಾರಿಕ ಬಳ್ಳಿಯನ್ನು ಅಗ್ನಿಶಾಮಕ ಠಾಣೆಯ ರಸ್ತೆಯ ಎರಡೂ ಬದಿಗೆ ಬೆಳೆಸಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ. ಅಲ್ಲದೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ತಮ್ಮ ಕಚೇರಿಯ ಆವರಣದಲ್ಲಿಯೇನೆಟ್ಟು ಬೆಳೆಸುತ್ತಿದ್ದಾರೆ. ಇದರಿಂದಾಗಿ ಠಾಣೆಯ ಆವರಣವು ಹಸಿರುಮಯವಾಗಿ ವಿವಿಧ ಜಾತಿಯಗಿಡಮರಗಳಿಂದ ಕಂಗೊಳಿಸುತ್ತಿದ್ದು, ಅನೇಕಜಾತಿಯ ಪಕ್ಷಿಗಳು ಗಿಡಮರಗಳಲ್ಲಿ ತಮ್ಮ ವಾಸಸ್ಥಾನ ಮಾಡಿಕೊಂಡಿವೆ. ಸಿಬ್ಬಂದಿ ಎಚ್‌.ಆರ್‌.ಶೇಕ್ಷಾವಲಿ ಮತ್ತು ಸಹಾಯಕ ಸಿಬ್ಬಂದಿ ಕಚೇರಿ ಆವರಣವನ್ನು ಹಸರೀಕರಣ ಮಾಡಲು ಮುಂದಾಗಿದ್ದು, ಖರ್ಚು ವೆಚ್ಚವಿಲ್ಲದೆ ತಮ್ಮಲ್ಲಿ ದೊರೆಯುವ ವಸ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಠಾಣೆಯ ಆವರಣದಲ್ಲಿರುವ ಸಸಿಗಳನ್ನು ಕಸಿ ಮಾಡಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೆಲಸವಿಲ್ಲದ ಸಂದರ್ಭದಲ್ಲಿ ಗಿಡಮರಗಳನ್ನು ಯಾವುದೇ ವೆಚ್ಚವಿಲ್ಲದೆ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿ ಬೆಳೆಸುತ್ತಿದ್ದೇವೆ.ಇದರಿಂದ ಠಾಣೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಇದಕ್ಕೆ ಸಹಾಯಕ ಠಾಣಾ ಧಿಕಾರಿ ಶರಣಪ್ಪರ ಸಹಕಾರ ಇದೆ. – ಎಚ್‌.ಆರ್‌. ಶೇಕ್ಷಾವಲಿ, ಅಗ್ನಿಶಾಮಕ ಸಿಬ್ಬಂದಿ.

 

Advertisement

-ಆರ್‌.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next