Advertisement

ಪರಿಸರಸ್ನೇಹಿ ಜೀವನ ಸಾಗಿಸಿ

12:10 PM Jun 06, 2018 | |

ದಾವಣಗೆರೆ: ಜಗತ್ತು ಉಳಿಯಲು ಇಂದು ಪರಿಸರ ಉಳಿಸಲೇ ಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಪರಿಸರ ಸ್ನೇಹಿಯಾಗಿ ಜೀವನ ನಡೆಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮನವಿ ಮಾಡಿದ್ದಾರೆ.

Advertisement

ಹಳೇ ಕುಂದುವಾಡದ ಕರಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಪರಿಸರ ಸಂರಕ್ಷಣಾ ವೇದಿಕೆ, ಜನತಾ ರಕ್ಷಣಾ ವೇದಿಕೆ(ಕುಂದುವಾಡ), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜ್ಞಾನ ಪರಿಷತ್‌, ಅಮೃತ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಪರಿಸರ ಜಾತ್ರೆ-2018ರ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಳೇ ಕುಂದುವಾಡ ನಗರಕ್ಕೆ ಸೇರಿದ್ದರೂ ಸಹ ಹಳ್ಳಿ ಸೊಗಡು ಮರೆಯಾಗಿಲ್ಲ, ಉತ್ತಮ ಪರಿಸರ ವಾತಾವರಣ ಇಲ್ಲಿದೆ ಎಂದರು.

ಬೆಂಗಳೂರಿನಂತ ಜಾಗಗಳಲ್ಲಿ ಹೋಗಿ ಬಂದರೆ 30 ಸಿಗರೇಟ್‌ ಸೇದಿದಷ್ಟು ಕೆಟ್ಟ ಅನುಭವ ಆಗುವ ಪರಿಸ್ಥಿತಿ ಇದೆ. ಜನಸಂಖ್ಯಾ ಸ್ಫೋಟದಿಂದ ಪರಿಸರ ನಾಶವಾಗುತ್ತಿದೆ. ಈಗಿನಿಂದಲೇ ಪ್ರತಿಯೊಬ್ಬರೂ ಪರಿಸರ ಕಾಪಾಡದಿದ್ದರೆ
ಮುಂದಿನ ದಿನಗಳಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕಟ್ಟಿಕೊಂಡು ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಮನೆ ಮುಂದೆ ಕಾರು ನಿಲ್ಲಿಸಲು ಜಾಗಬಿಡುವ ಜನರು, ಗಿಡ ನೆಡಲು ಜಾಗ ಬಿಡುವುದಿಲ್ಲ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಮರಗಳನ್ನು ಬೆಳೆಸಿ ಉಳಿಸಬೇಕು, ಅರಣ್ಯ ಇಲಾಖೆ ಲಕ್ಷಗಟ್ಟಲೆ ಗಿಡಗಳನ್ನು ಹಾಕಿದ್ದಾರೆ. ಕೆಲವು ಅಧಿಕಾರಿಗಳು ಕಾಪಾಡುತ್ತಾರೆ, ಕೆಲವರು ತಿರುಗಿ ಸಹ ನೋಡುವುದಿಲ್ಲ. ಅರಣ್ಯ ಇಲಾಖೆ ಜೊತೆಗೆ ಸಂಘ ಸಂಸ್ಥೆಗಳು ಕಾಳಜಿ ವಹಿಸಬೇಕು. ಮಕ್ಕಳು ಸಹ ಮನೆ ಎದುರು ಗಿಡ ಬೆಳೆಸಿ ಪೋಷಿಸಬೇಕು ಎಂದು ಮನವಿ ಮಾಡಿದರು. ನಗರಪಾಲಿಕೆ ಸದಸ್ಯ ಎಚ್‌ ತಿಪ್ಪಣ್ಣ, ಸಾಲುಮರದ ವೀರಾಚಾರಿ ಮಾತನಾಡಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ , ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಗಣ್ಯರಾದ ರಾಜಣ್ಣ, ಎಚ್‌.
ಎನ್‌. ಗುರುನಾಥ್‌, ಕೆ.ಬಿ. ಕೊಟ್ರೇಶ್‌, ಡಾ| ಬಿ.ಇ. ರಂಗಸ್ವಾಮಿ, ಗಿರೀಶ್‌ ಎಸ್‌. ದೇವರಮನಿ, ಮಧುನಾಗರಾಜ್‌
ಕುಂದುವಾಡ, ಕೆ.ಟಿ. ಗೋಪಾಲಗೌಡ್ರು, ಎಚ್‌.ಸಿ. ಜಯ್ಯಮ್ಮ, ಪ್ರಸನ್ನ ಬೆಳಕೆರೆ, ಎ.ಬಿ. ಹನುಮಂತಮ್ಮ, ದೇವನಗರಿ
ಎಂ. ಮನು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next