ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ
ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದು ಕಂಡುಬಂದಿದೆ.
Advertisement
ಮಣಿಪಾಲ: ಕೋವಿಡ್ 19 ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಆವರಿಸಿದೆ. ಜನರ ಮೇಲೆ ದುಷ್ಪರಿಣಾಮ ಉಂಟು ಮಾಡಿರುವ ಕೋವಿಡ್ ವೈರಸ್ ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಹಾಗೆಂದು ಇದು ಶಾಶ್ವತ ಪರಿಹಾರವಲ್ಲ.
Related Articles
Advertisement
ಅಧ್ಯಯನಕ್ಕೆ ಒಳಪಟ್ಟ ಹೊಸದಿಲ್ಲಿ, ಸಿಯೋಲ್, ವುಹಾನ್ ಮತ್ತು ಮುಂಬಯಿ ನಗರಗಳು ಸೇರಿದಂತೆ ಒಟ್ಟು 7 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಗಮ ನಾರ್ಹ ಸುಧಾರಣೆ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಪಿಎಂ 2.5 ಮಾಲಿನ್ಯದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯು ಮಾಲಿನ್ಯ ಈಗಾಗಲೇ ಜಾಗತಿಕ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಇದು ಪ್ರತಿವರ್ಷ 70 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ.
ಮತ್ತೆ ಏರಿಕೆ?ಲಾಕ್‌ಡೌನ್ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದ ಮೇಲೆ ವಾಯುಮಾಲಿನ್ಯವು ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ. ಹೊಸದಿಲ್ಲಿಯಲ್ಲಿ ಶೇ. 60ರಷ್ಟು ಮಾಲಿನ್ಯ ಕಡಿಮೆಯಾಗಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲೂ ಹಾಗೆಯೇ. ಜಗತ್ತಿನ ಅತೀ ಹೆಚ್ಚು ಮಾಲಿನ್ಯಕಾರಕ ರಾಷ್ಟ್ರಗಳ ಪೈಕಿ ಭಾರತವೂ ಒಂದು. ದಕ್ಷಿಣ ಕೊರಿಯಾದಲ್ಲಿ ಶೇ. 54, ವುಹಾನ್‌ನಲ್ಲಿ ಶೇ. 44, ಲಾಸ್‌ಏಂಜಲೀಸ್‌ನಲ್ಲಿ 18 ದಿನಗಳ ಅವಧಿಯಲ್ಲಿ ಶೇ. 31ರಷ್ಟು ಮಾಲಿನ್ಯ ಕಡಿಮೆಯಾಗಿದೆ. ಯುರೋಪ್, ಲಂಡನ್, ಮ್ಯಾಡ್ರೀಡ್, ರೋಮ್‌ಗಳಲ್ಲಿಯೂ ಇಳಿಕೆಯಾಗಿದೆ. ಇದೇ ಪರಿಹಾರವಲ್ಲ
ಇದ್ದಕ್ಕಿದ್ದಂತೆ ಎಲ್ಲ ಕಾರ್ಖಾನೆಗಳನ್ನು ಬಂದ್ ಮಾಡಿ, ರಸ್ತೆಯಲ್ಲಿ ವಾಹನ ಸಂಚಾರವನ್ನು ತಗ್ಗಿಸುವುದು ಶಾಶ್ವತ ಪರಿಹಾರವಲ್ಲ. ಇದು ಹವಾಮಾನ ಬದಲಾವಣೆ ಯನ್ನು ನಿಭಾಯಿಸುವ ಸುಸ್ಥಿರ ವಿಧಾನವಲ್ಲ. ಇಂದು ಜಗತ್ತು ಹೇಗೆ ಕೋವಿಡ್-19ರ ವಿರುದ್ಧ ಒಟ್ಟಾಗಿ ಹೋರಾಡುತ್ತಿದೆಯೋ ಹಾಗೆಯೇ ಹವಾಮಾನ ಬಿಕ್ಕಟ್ಟು ಬಗೆಹರಿಸಲೂ ಪ್ರಯತ್ನಿಸಬೇಕು. ಪರಿಸರವನ್ನು ಕಾಪಾಡಲು ಒಟ್ಟಾಗಿ ಪರಿಶ್ರಮಿಸಬೇಕು. ಕೋವಿಡ್-19 ಸೋಂಕು ಮನುಷ್ಯ ಪ್ರಕೃತಿಯ ಜತೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದೆ.