Advertisement
ಹೀಗಾಗಿ ಅದು ಉದ್ಯಾನ ನಗರಿಯ ಅತ್ಯಂತ ದೊಡ್ಡ ಕೊಳಚೆ ಟ್ಯಾಂಕ್ ಆಗಿ ಪರಿವರ್ತನೆಯಾಗುತ್ತಿದೆ ಎಂದು ಎನ್‌ಜಿಟಿಗೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ಪ್ರಬಲವಾಗಿ ಟೀಕಿಸಲಾಗಿದೆ. ಈ ಬಗ್ಗೆ ಕೂಡಲೇ ಗಮನ ಹರಿಸದೇ ಇದ್ದಲ್ಲಿ ಅದು ಜ್ವಲಂತ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
Related Articles
Advertisement
12 ಬಾರಿ ಬೆಂಕಿ: 2016ರ ಆ.12ರಂದು ಮೊದಲ ಬಾರಿಗೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಇದು ವರೆಗೆ ಸುಮಾರು 12 ಬಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಮಿತಿ ಹೇಳಿದೆ.
ಹಲವು ಶಿಫಾರಸುಗಳು: ಕೆರೆ ದಂಡೆಯ ಸೂಕ್ತ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಕದಂತೆ ತಡೆಯಲು ಕ್ರಮ ಕೈಗೊಳ್ಳಬಹುದು. ತ್ಯಾಜ್ಯಗಳನ್ನು ಹಾಕುವ ಮೂಲಕ ಕೆರೆ ಒತ್ತುವರಿ ತಡೆಯಲು ಭದ್ರತಾ ಸಿಬ್ಬಂದಿ ನೇಮಿಸಲೂ ಅದು ಸಲಹೆ ಮಾಡಿದೆ.
ಇದರ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರ ಸಂಸ್ಥೆಗಳಲ್ಲಿನ ಅನುಭವಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲೂ ಸಮಿತಿ ಶಿಫಾರಸು ಮಾಡಿದ್ದು, ಅದರ ಸಲಹೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಸೂಚಿಸಿದೆ.
ವರ್ತೂರು ಕೆರೆ ಸ್ಥಿತಿ ಬದಲಿಲ್ಲ: ಎನ್‌ಜಿಟಿ ಸಮಿತಿ ವರ್ತೂರು ಕೆರೆಯ ಸ್ಥಿತಿಯ ಬಗ್ಗೆಯೂ ಆಘಾತ ವ್ಯಕ್ತಪಡಿಸಿದೆ. “ಬೆಳ್ಳಂದೂರು ಕೆರೆಯಂತೆ ವರ್ತೂರು ಕೆರೆಯ ಸ್ಥಿತಿಯೂ ಹಾಗೇ ಆಗಿದೆ. ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಕೆಡವಿದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಪ್ರತಿ ದಿನ 480 ಮಿಲಿಯನ್ ಲೀಟರ್ ಕೊಳಚೆ ನೀರು ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಹರಿಯುತ್ತದೆ.
ಇದಲ್ಲದೆ ಸ್ಥಳೀಯವಾಗಿ ಉಂಟಾಗುವ 60-70 ಮಿಲಿಯನ್ ಲೀಟರ್ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಅದರ ಸ್ಥಿತಿ ಬೆಳ್ಳಂದೂರಿಗಿಂತ ಕೆಟ್ಟದಾಗಿದೆ. ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂಬ ವಿಚಾರವನ್ನೂ ಗಮನಿಸದೆ ತ್ಯಾಜ್ಯವನ್ನು ಅಲ್ಲಿಗೆ ಸುರಿಯಲಾಗುತ್ತದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಕಟ‚rಡ ತ್ಯಾಜ್ಯಗಳನ್ನು ಹಾಕಿಯೇ ಕೆರೆಯ ಮೂಲಕವೇ ರಸ್ತೆ ನಿರ್ಮಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಪೈಪ್ ಲೈನ್ ಹಾಕುವ ನೆಪದಲ್ಲಿಯೂ ಕಟ‚rಡ ನಿರ್ಮಾಣ ತ್ಯಾಜ್ಯಗಳನ್ನು ಹಾಕಲಾಗಿದೆ.