ಹುಣಸೂರು: ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ದೀಪಾ ತಿಳಿಸಿದರು.
ತಾಲೂಕಿನ ಚಿಲ್ಕುಂದ ಗ್ರಾಮದಲ್ಲಿ ತಾಪಂ, ಅರಣ್ಯ ಇಲಾಖೆ, ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಐಟಿಸಿ ಕಂಪನಿ, ಇನ್ನರ್‌ವ್ಹೀಲ್ ಕ್ಲಬ್, ಗ್ರಾಪಂಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಂಡೆಕೆರೆಯ ನಡೆದ ಪರಿಸರ ದಿನದಲ್ಲಿ ಸಸಿ ನೆಟ್ಟು ಮಾತನಾಡಿದರು.
ನಾಡಿದ ಅತೀ ಕೆಟ್ಟ ಪ್ರಾಣಿ ಎಂದೇ ಗುರುತಿಸಲ್ಪಡುವ ಮಾನವ ತನ್ನೆಲ್ಲಾ ಬವಣೆಗೆ ಕೆರೆ ಒತ್ತುವರಿ, ಮರಕಡಿತ ಸೇರಿದಂತೆ ಪ್ರಕೃತಿಯನ್ನು ವಿನಾಶಗೊಳಿಸಿದ್ದಾನೆ. ಮಳೆ ಪ್ರಮಾಣ ಕಡಿಮೆಯಾಗಿದೆ, ಹಿಮಾಲಯ ಕರಗುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆಗಾಗಿ ಜಮೀನುಗಳಲ್ಲಿ ನಿರುಪಯುಕ್ತ ಸ್ಥಳ, ರಸ್ತೆಬದಿ, ಮನೆ ಅಂಗಳದಲ್ಲಿ ಸಸಿ ನೆಟ್ಟು ಪೋಷಿಸಬೇಕೆಂದರು.
2,5 ಲಕ್ಷ ಸಸಿ ನೆಟ್ಟಿದ್ದೇವೆ: ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಅರಣ್ಯ ಇಲಾಖೆ ಸಹಕಾರದಡಿ 41 ಗ್ರಾಪಂ ವ್ಯಾಪ್ತಿಯ ಸ್ಮಶಾನ, ಶಾಲಾ ಆವರಣ, ಕಚೇರಿ ಆವರಣ, ರಸ್ತೆ ಬದಿ ಮತ್ತಿತರೆಡೆ 2.5 ಲಕ್ಷ ಸಸಿ ನೆಡಲಾಗಿದೆ. ಈ ಕೆರೆ ಅಂಗಳಲ್ಲಿ 4 ಸಾವಿರ ಸಸಿ ನೆಡಲಾಗುತ್ತಿದೆ ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಎಂ.ನಾರಾಯಣ್ ಸಹ ಪರಿಸರ ಸಂರಕ್ಷಣೆ ಮಹತ್ವ ತಿಳಿಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಣ್ಣಹನುಮೇಗೌಡ, ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯ ಪ್ರೇಮೇಗೌಡ, ಆರ್‌ಎಫ್‌ಒಗಳಾದ ಸಂದೀಪ್,
ರುದ್ರೇಶ್ ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ವಕೀಲರ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಖಜಾಂಚಿ ವೀರೇಶರಾವ್ ಬೋಬಡೆ, ವಕೀಲರಾದ ನಾಗಣ್ಣ, ಪವಿತ್ರ, ಐಟಿಸಿ ಕಂಪನಿ ರಘುರಾಮ್, ನಾರಾಯಣ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಡಾ.ರಾಜೇಶ್ವರಿ, ಪಿಡಿಒ ಶಿವಕುಮಾರ್, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು.