Advertisement

ಪರಿಸರ ಕಾಳಜಿ ನಿತ್ಯ ಕಾಯಕವಾಗಲಿ: ಕಿತ್ತಲಿ

03:11 PM Jul 08, 2019 | Team Udayavani |

ರೋಣ: ಪರಿಸರ ಕಾಳಜಿ ಕೇವಲ ವರ್ಷದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಅದು ನಿತ್ಯದ ಕಾಯಕವಾಗಬೇಕು. ಅಂದಾಗ ಸಮೃದ್ಧ ಪರಿಸರ ನಿರ್ಮಾಣವಾಗಿ ಉತ್ತಮ ಮಳೆ, ಬೆಳೆ ಕಾಣಲು ಸಾಧ್ಯ ಎಂದು ಮುಖ್ಯೋಪಾಧ್ಯಾಯ ಎಸ್‌.ಬಿ. ಕಿತ್ತಲಿ ಹೇಳಿದರು.

Advertisement

ತಾಲೂಕಿನ ಮಾಡಲಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆವರಣ ಹಸಿರೀಕರಣ ಕಾರ್ಯಕ್ರಮಕ್ಕೆ ನೂರು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಪರಿಸರ ಸ್ವಚ್ಚತೆ ಮತ್ತು ಸಂರಕ್ಷಣೆ ನಮ್ಮ ಮನೆ ಹಾಗೂ ಶಾಲೆಯಿಂದಲೇ ಆರಂಭವಾಗಬೇಕು. ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷಣೆ ಬಗ್ಗೆ ಎಚ್ಚೆತ್ತುಕೊಂಡರೆ ಸಾಲದು. ಚಿನ್ನ,ಬೆಳ್ಳಿ, ಹಣ ಕೂಡಿಡುವ ಬದಲು ಪರಿಸರ, ಅರಣ್ಯ ಸಂರಕ್ಷಣೆ ಮಾಡಿದಲ್ಲಿ ನಮ್ಮ ಮತ್ತು ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಬೇಕು. ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು. ಹಸಿರುಮಯ ವಾತಾವರಣ ನಿರ್ಮಾಣ ಮಾಡುವ ಹಾಗೂ ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ ನಮಗಿದೆ ಎಂದು ಹೇಳಿದರು.

ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದರಿಂದ ಬರಗಾಲ ಎದುರಾಗುತ್ತದೆ. ಇವುಗಳನ್ನು ತೊಡೆದುಹಾಕಿ ನಿರ್ಮಲ ಮನಸ್ಸಿನ ಆರೋಗ್ಯವಂತ ನಾಡು ಕಟ್ಟಲು ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಿಸುವುದು ಅವಶ್ಯವಾಗಿದೆ. ಅದು ನಮ್ಮೆಲ್ಲರ ಮೇಲಿರುವ ಗುರುತರ ಜವಾಬ್ದಾರಿಯಾಗಿದೆ. ನಾವು ಪರಿಸರ ಸಂರಕ್ಷಿಸುವುದರಿಂದ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ. ಪ್ರತಿಯೊಬ್ಬರು ಮನೆಗೊಂದು ಗಿಡ ನೆಡಬೇಕು. ಅದರ ಪಾಲನೆ ಪೋಷಣೆ ಮಾಡಬೇಕು. ಇದರಿಂದ ಭೂಮಿ ಮೇಲಿನ ಉಷ್ಟಾಂಶ ತಡೆಗಬಹುದು. ಸಮಯಕ್ಕೆ ಸರಿಯಾಗಿ ಮಳೆಯಾಗುವುದರಿಂದ ರೈತರು ಉತ್ತಮ ಬೆಳೆ ಬೆಳೆದು ದೇಶದಲ್ಲಿ ಉದ್ಭವಾಗುವ ಆಹಾರ ಸಮಸ್ಯೆ ನೀಗಿಸಬಹುದು ಎಂದು ಹೇಳಿದರು.

ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವೈ.ಡಿ. ಗಾಣಿಗೇರ ಮಾತನಾಡಿ, ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗಳಿಂದ ವಾತಾವರಣ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಈ ವ್ಯವಸ್ಥೆ ಹಾಗೇ ಮುಂದೂವರಿದರೆ ನಮ್ಮ ದುರಂತಕ್ಕೆ ನಾವೇ ಹೋಣೆಯಾಗಬೇಕಾಗುತ್ತದೆ. ಆದ್ದರಿಂದ ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸಕ್ಕೆ ಮುಮದಾಗುವ ಗುರುತರ ಜವಾಬ್ದಾರಿ ಸರ್ವರ ಮೇಲಿದೆ ಎಂದು ಹೇಳಿದರು

ಪರಿಸರ ಮಾಲಿನ್ಯದಂತಹ ದುಷ್ಪರಿಣಾಮದಿಂದ ಅದೇಷ್ಟೋ ಜನರು ವಿವಿಧ ರೋಗ, ರುಜಿನುಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯವಂತ ನಾಡು, ಸದೃಢವಾದ ಜನರು ಬೆಳೆಯಲು ಪರಿಶುದ್ಧ ಪರಿಸರದ ಅವಶ್ಯಕತೆ ಬಹಳಷ್ಠಿದೆ. ಹೀಗಾಗಿ ಪ್ರತಿಯೊಬ್ಬರು ಸಸಿಗಳನ್ನು ಮಕ್ಕಳಂತೆ ಲಾಲನೆ, ಪಾಲನೆ,ಪೋಷಣೆ ಮಾಡಿ ಪರಿಸರ ಸಂವರಕ್ಷಣೆಗೆ ಪಣತೋಡಬೇಕು. ಅಲ್ಲದೇ ಮುಂದಿನ ಪೀಳಿಗೆ ಉಜ್ವಲ ಭವಿಷ್ಯ ರಹದಾರಿ ಮಾಡೋಣ ಎಂದು ಕರೆ ನೀಡಿದರು.

Advertisement

ಎಸ್‌ಡಿಎಂಸಿ ಅಧ್ಯಕ್ಷ ಬಸಲಿಂಗನಗೌಡ ರಾಯನಗೌಡ್ರ ಮಾತನಾಡಿದರು. ಎಂ.ಎಂ. ಗುಡಿಮನಿ, ಕೆ.ಬಿ. ತಂಬ್ರಳ್ಳಿ, ಎಂ.ಬಿ. ಮಾದರ, ವಿ.ಎಚ್. ನವಲೆ, ಶ್ರುತಿ ಲೂತಿಮಠ, ಎ.ವಿ. ಪೂಜಾರ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next