Advertisement

ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಪರಿಸರ ಕಾಳಜಿ

11:12 PM Nov 21, 2019 | Sriram |

ಉಡುಪಿ: ಮದುವೆ ಸಂಬಂಧವನ್ನು ಬೆಸೆದು ಒಂದು ಮಾಡುತ್ತದೆ. ಎಲ್ಲ ಪರಿವಾರದವರು, ಸ್ನೇಹಿತರನ್ನು ಒಂದುಗೂಡಿಸಲು ಮದುವೆಯ ಆಮಂತ್ರಣ ಪತ್ರ ನೀಡಿ ಆಹ್ವಾನಿಸುವುದು ನಮ್ಮ ಸಂಪ್ರದಾಯ.

Advertisement

ಮಾಲಿನ್ಯದಿಂದಾಗಿ ಇಂದಿನ ಕಲುಷಿತ ವಾತಾವರಣದಲ್ಲಿ ನಾವು ಪರದಾಡುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.24ರಂದು ಶಾರದಾ ಕಲ್ಯಾಣಮಂಟಪದಲ್ಲಿ ನಡೆಯಲಿರುವ ಕುಂಜಿಬೆಟ್ಟುವಿನ ಅಂಬಿಕಾ ಪ್ರಕಾಶ ಅವರ ಪುತ್ರ ವಿಜಯ್‌ ಪಿ.ಹಂದೆ ಮತ್ತು ಪುಣ್ಯಪ್ರಭಾ ಮತ್ತು ಶ್ರೀ ರಾಮಚಂದ್ರ ಮಯ್ಯರ ಪುತ್ರಿನಿವೇದಿತಾ ಅವರ ಮದುವೆಯ ಆಮಂತ್ರಣ ಗಮನಸೆಳೆದಿದೆ.

ಈ ಆಮಂತ್ರಣ ಪತ್ರಿಕೆ ಹೇಗಿದೆಯೆಂದರೆ ಮದುವೆ ಮುಗಿದ ಅನಂತರವೂ ಬಿಸಾಕುವಂತಿಲ್ಲ! ಯಾಕೆಂದರೆ ಇದರ ಒಳಗೆ ತುಳಸೀ ಗಿಡದ ಬೀಜಗಳಿವೆ. ಪತ್ರದ ಮತ್ತೂಂದು ಪ್ರತಿಯನ್ನು ಮಣ್ಣಲ್ಲಿರಿಸಿ ನೀರು ಹಾಕಿದರೆ ಪೇಪರ್‌ ಗೊಬ್ಬರ, ತುಳಸೀ ಉದ್ಬವವಾಕುವ ಕಲೆಗಾರಿಕೆಯನ್ನು ಅಚ್ಚೆಹಾಕಲಾಗಿದೆ ಇದು ನೋಡುಗರನ್ನು ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ.

ಜನರು ತಮ್ಮ ಪ್ರತಿಷ್ಠೆಗಾಗಿ ವಿವಿಧ ರೀತಿಯ ಆಮಂತ್ರಣ ಪತ್ರಿಕೆಗಳನ್ನು ಪ್ರಕಟಮಾಡುವುದನ್ನು ನಾವು ಈಗಾಗಲೇ ನೋಡಿರುತ್ತೇವೆ. ಆದರೆ ಇದರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬಹುದು ಎನ್ನುವ ವಿಚಾರ ಹೊಳೆದಿರುವುದು ಮಾದರಿಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿ ಪರಿಸರ ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕಿದೆ. ಆ ಹಿನ್ನಲೆಯನ್ನು ಬೆಳೆಸುವ ಕೆಲಸ ಈ ಆಮಂತ್ರಣ ಪತ್ರಿಕೆ ಮೂಲಕ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next