Advertisement
ಆಧುನಿಕತೆಯ ವಿಜ್ಞಾನ, ತಂತ್ರಜ್ಞಾನ, ಸಹಿತ ಎಲ್ಲ ಕ್ಷೇತ್ರಗಳಲ್ಲಿ ಮಾನವ ವಿಕಾಸವಾದ ಅನಂತರ ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಏನಾಗುತ್ತಿದೆ ಎಂಬ ಕನಿಷ್ಠ ಅರಿವು ಇಲ್ಲದಂತಾಗಿದ್ದಾನೆ. ಅಷ್ಟರ ಮಟ್ಟಿಗೆ ಆಧುನಿಕ ತಂತ್ರಜ್ಞಾನಗಳಿಗೆ ಅಂಟಿಕೊಡಿದ್ದಾನೆ. ಅಂತವರಿಗೆ ಇಂತಹ ದಿನಗಳು, ಜಾಲತಾಣದ ಪರದೆಯ ಮೇಲೆ ಕಂಡಾಗ ಮಾತ್ರ ಆ ದಿನಗಳ ಬಗ್ಗೆ ಸ್ಟೇಟಸ್ ಹಾಕುತ್ತಾರೆ. ಹೀಗಿದ್ದಾಗ ಕೇವಲ ಒಂದು ದಿನದ ಮಟ್ಟಿಗೆ ಪರಿಸರ ಪ್ರಜ್ಞೆ ಮೆರದರೆ ಪರಿಸರ ಸಂರಕ್ಷಣೆ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ನಾವು ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಹಸುರಿನ ಸಂರಕ್ಷಿಸಬೇಕಾದ ತುರ್ತಿನ ಸಂಗತಿಯಾಗಿದೆ. ಕುಟುಂಬ, ನೆರೆಹೊರೆ, ಸ್ನೇಹಿತರಲ್ಲಿ ಈ ವಿಚಾರ ವಿನಿಮಯಗೊಂಡು ಕಾರ್ಯರೂಪಕ್ಕೆ ಬರಬೇಕಿದೆ. ಸರಕಾರ ಮತ್ತು ಸಾರ್ವಜನಿಕರು ಸಮನ್ವಯದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ಕೂಡ ಸಲ್ಲದು. ಶುದ್ಧಗಾಳಿ, ನೀರು, ಪರಿಸರದಿಂದ ನಾವು ಆರೋಗ್ಯವಂತರಾಗಿರಲು ಸಾಧ್ಯ. ನಾವು ಅರಣ್ಯ ಸಂರಕ್ಷಿಸಿದರೆ, ನಮ್ಮ ಭವಿಷ್ಯ ಹಸನನಾಗಿರುತ್ತದೆ. ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ
ನಾವು ಬಳಸುವ ಯಾವುದೇ ವಸ್ತುಗಳಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು, ಮನೆಯಲ್ಲಿ ಒಣತ್ಯಾಜ್ಯ-ಹಸಿತ್ಯಾಜ್ಯ ವಿಂಗಡಣೆ ಮಾಡಿ ಸಾವಯವ ಗೊಬ್ಬರ ತಯಾರಿಸುವುದು ಉತ್ತಮ ಪರಿಸರ ನಡೆಯಾಗಿದೆ.
Related Articles
ವಾಹನಗಳ ವಿಪರೀತವಾಗಿ ಬಿಡುವ ಹೊಗೆಯಿಂದಾಗಿ ಇಂದು ವಾಯು ಮಾಲಿನ್ಯ ಅಧಿಕವಾಗಿದೆ. ಇದರಿಂದಾಗಿ ಈ ಹಿಂದೆ ಹೊಸದಿಲ್ಲಿ ಸರಕಾರ ಜಾರಿಗೊಳಿಸಿದ್ದ ಸಮ-ಬೆಸ ಸಂಖ್ಯೆ ವಾಹನಗಳು ಓಡಾಟದ ಯೋಜನೆಯೂ ಜಾರಿಗೊಳಿಸುವುದಕ್ಕೆ ಇದು ಸಕಾಲ. ಅಲ್ಲದೇ ಕಾರ್ಖಾನೆಗಳ ತ್ಯಾಜ್ಯ, ಹೊಗೆಗಳಿಗೆ ಸರಕಾರ ನಿರ್ಬಂಧಕ್ಕೆ ಅಗತ್ಯ ಕ್ರಮ ವಹಿಸಿದಾಗ ಕಾರ್ಬನ್ ಮುಕ್ತ ಪರಿಸರ ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರ ದೇವತೆಗೆ ಹೆತ್ತ ತಾಯಿಗೆ ನೀಡುವ ಸ್ಥಾನಮಾನವನ್ನು ಪರಿಸರಕ್ಕೂ ನೀಡಬೇಕಿದೆ. ಸಕಲ ಜೀವಸಂಕುಲಗಳಿಗೆ ಇರುವುದೊಂದೇ ಭೂಮಿ. ಅದರ ರಕ್ಷಣೆ ,ಸಂರಕ್ಷಣೆ ಹೊಣೆಯಲ್ಲಿ ಪ್ರತಿಯೊಬ್ಬರು ಪಾಲುದಾರರೆ ಆಗಿದ್ದಾರೆ. ಪರಿಸರ ಸಂರಕ್ಷಣೆಗೆ ಎಲ್ಲರ ಕೈಗಳು ಜತೆಗೂಡಬೇಕಿದೆ.
Advertisement
– ಶಿವರಾಜ್ ಎಂ.ಕೆ., ಮಾಚೇನಹಳ್ಳಿ