Advertisement

ಸ್ವಚ್ಛ , ನಿರ್ಮಲ ಪರಿಸರ ನಿರ್ಮಾಣಕ್ಕೆ  ಅಭಿಯಾನ

07:05 AM Jul 03, 2018 | Team Udayavani |

ಉಡುಪಿ: ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕೆಥೊಲಿಕ್‌ ಸಭಾ ಮತ್ತು ವಿವಿಧ ಸಮಾಜಮುಖ ಸಂಘಟನೆಗಳ ಸಹಕಾರದೊಂದಿಗೆ ಏಕಕಾಲದಲ್ಲಿ ಜಿಲ್ಲೆಯಾದ್ಯಂತ ಪರಿಸರ ಅಭಿಯಾನ ಕಾರ್ಯಕ್ರಮವನ್ನು ರವಿವಾರ ಆಯೋಜಿಸಿತು.

Advertisement

ಶಂಕರಪುರದ ಸಂತ ಜೋನ್ಸ್‌  ಚರ್ಚ್‌ನಲ್ಲಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ರೆ| ಫ‌ರ್ಡಿನಾಂಡ್‌ ಗೊನ್ಸಾಲ್ವಿಸ್‌ ಗಿಡ ನೆಟ್ಟು ಬಳಿಕ ರಸ್ತೆ ಬದಿಯ ಕಸವನ್ನು ಆಯುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಉಡುಪಿ ಪ್ರದೇಶದ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಮಾತನಾಡಿ, ಸ್ವಚ್ಛತೆಯ ಪರಿಪಾಠ ನಮ್ಮ ಹೃದಯದಿಂದ ಬಂದಾಗ ನಾನು ಅಭಿವೃದ್ಧಿ ಕಾಣಲು ಸಾಧ್ಯ. ಇತರ ದೇಶಗಳಿಗೆ ಹೋಲಿಸಿದರೆ ನಾವು ಭಾರತೀಯರು ಅವರಿಂದ ಸ್ವಚ್ಛತೆಯ ಬಗ್ಗೆ ಸಾಕಷ್ಟು ಕಲಿಯಲು ಇದೆ ಎಂದವರು ತಿಳಿಸಿದರು. 

ರೋಟರಿ ಕ್ಲಬ್‌ ಶಂಕರಪುರ ಇದರ ಅಧ್ಯಕ್ಷ  ಚಂದ್ರ ಪೂಜಾರಿ, ಕೆಥೊಲಿಕ್‌ ಸಭಾ ಪಾಂಗಾಳ ಘಟಕದ ಉಪಾಧ್ಯಕ್ಷ ವಿಕ್ಟರ್‌ ಮೆಂಡೊನ್ಸಾ, ರೋಟರಾಕ್ಟ್ ಕ್ಲಬ್‌ ಸುಭಾಸ್‌ ನಗರ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಐಸಿವೈಎಮ್‌ ಅಧ್ಯಕ್ಷ ಅÂರನ್‌ ಡಿಸೋಜಾ, ಚರ್ಚ್‌ ಪಾಲನಾ ಸಮಿತಿ ಉಪಾಧ್ಯಕ್ಷ ಮಾರ್ಕ್‌ ವಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಅಭಿಯಾನದ ಪ್ರಯುಕ್ತ ಜಿಲ್ಲೆಯ 50 ಚರ್ಚುಗಳಲ್ಲಿ  ಪರಿಸರ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರ, ಜಾಗೃತಿ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡಗಳ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಗಳು ನಡೆದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next