ತುಮಕೂರು: ಜನರಲ್ಲಿ ಪರಿಸರದ ಬಗ್ಗೆ ಜಾಗೃತಿಉಂಟು ಮಾಡಲು ಅಖೀಲ ಭಾರ ತೀಯವಿದ್ಯಾರ್ಥಿ ಪರಿಷತ್ ವತಿಯಿಂದ ಪರಿ ಸರ ಸಂರಕ್ಷಣೆಗಾಗಿ ಗಿಡಗಳನ್ನು ನೀಡುವ ಮೂಲಕ ಪರಿಸರ ಜಾಗೃತಿ ಅಭಿಯಾನ ನಡೆಯಿತು.
ವಿಶ್ವ ಪರಿಸರ ದಿನದ ಪ್ರಯುಕ್ತ ಐದುದಿನ ಗಳ ಕಾಲ ನಡೆಯುತ್ತಿರುವ ಈ ಪರಿಸರಜಾಗೃತಿ ಅಭಿಯಾನದಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿದ್ಯಾರ್ಥಿಗಳಿಗೆ ಕೊರೊನಾ ವಾರಿಯರ್ಸ್‌ಗೆ ನಾಗರಿಕರಿಗೆ ನೀಡಿ ಪರಿಸರದ ಬಗ್ಗೆಜಾಗೃತಿ ಮೂಡಿಸಿದರು.
ನಾಡನ್ನು ಹಸಿರಾಗಿಸುವ ಸಂಕಲ್ಪ: ಎಬಿವಿಪಿವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪುಪಾಟೀಲ ಮಾತನಾಡಿ, ಎಬಿವಿಪಿಯಿಂದ ಕಳೆದಹಲವು ವರ್ಷಗಳಿಂದ ವಿನೂತನ ಅಭಿಯಾನ,ಯೋಜನೆ ಹಾಗೂ ವಿವಿಧ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿಗಳನ್ನನೆಡು ವುದು. ಅಷ್ಟೇ ಅಲ್ಲದೆ ಅವುಗಳನ್ನಪಾಲನೆ, ಪೋಷಣೆ ಮಾಡುವಂತಹ ಮಹತ್ತರಕೆಲಸ ವನ್ನ ಮಾಡುತ್ತಾ ನಾಡನ್ನು ಹಚ್ಚ ಹಸಿರಾಗಿಸುವ ಸಂಕಲ್ಪದೊಂದಿಗೆ ಪ್ರಕೃತಿ ಮಾತೆಯಸೇವೆಗಾಗಿ ತೊಡಗಿಸಿಕೊಂಡಿದ್ದೇವೆ ಎಂದರು.ಎಬಿವಿಪಿ ನಗರ ಉಪಾಧ್ಯಕ್ಷ ಡಾ.ಟಿ. ಪೃಥ್ವಿರಾಜ ಮಾತನಾಡಿ, ಪ್ರತಿ ವರ್ಷದಂತೆ ಈವರ್ಷವೂ ಸಹ ಬರಿದಾದ ಪ್ರಕೃತಿ ಮಾತೆಯಒಡಲನ್ನು ಮತ್ತೆ ಹಸಿರಾಗಿಸಲು ನವನವೀನವಾಗಿ ಕಂಗೊಳಿಸುವಂತೆ ಮಾಡಲು ತಾಯಿಭಾರತ ಮಾತೆಯ ಕೊರಳು ಹಸಿರಿನಿಂದಲೇಶೃಂಗರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನಹೊಂದಿ ಪರಿಸರ ದಿನದ ಈ ಶುಭ ಸಂದರ್ಭದಲ್ಲಿ ಮತ್ತೆ ಸಸಿಗಳನ್ನ ನೆಟ್ಟು ಪರಿಸರದ ರಕ್ಷಣೆಗೆಸಜ್ಜಾಗಿದ್ದೇವೆ ಎಂದರು.
ಗಿಡ ನೆಟ್ಟು ಪೋಷಣೆ ಮಾಡಿ: ಕೊರೊನಾಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿಎಲ್ಲರೂ ನಿಮ್ಮ ಮನೆಯ ಸುತ್ತಮುತ್ತಲಿನಪರಿಸರದಲ್ಲಿ ಗಿಡ ನೆಟ್ಟು ಪೊಷಣೆ ಮಾಡಿಇಂದಿನ ಸಮಾಜಕ್ಕೂ ಹಾಗೂ ಮುಂದಿನಪೀಳಿಗ ೆಗೂ ಅನುಕೂಲವಾಗುವ ಹಾಗೆಸುಂದರ ಪರಿಸರ ವನ್ನ ನಿರ್ಮಾಣಮಾಡೋಣ ಎಂದರು. ಎಬಿವಿಪಿ ತುಮಕೂರು ವಿಭಾಗ ಪ್ರಮುಖ ಅಜಯ್‌ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾಧಾ ಕೃಷ್ಣ, ಅಧ್ಯಾಪಕ ಕಿಶೋರ್, ಕಾರ್ಯಕರ್ತೆ ಚೈತ್ರಾ, ಪ್ರಮೋದ್, ಅಭಿ, ಶಿವು ಇದ್ದರು.