Advertisement

ಧರಣಿ ನಡುವೆ ಪರಿಸರ ಜನಜಾಗೃತಿ

01:28 PM Aug 23, 2018 | Team Udayavani |

ಬೀದರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರು ಕಳೆದ 14 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಿರುವ ಮಧ್ಯದಲ್ಲಿಯೇ ಬುಧವಾರ ಪರಿಸರ ಕುರಿತು ಜನಜಾಗೃತಿ ಕಾರ್ಯಕ್ರಮ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮುತ್ತಣ್ಣ, ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿರುವುದು ಖೇದಕರ ಸಂಗತಿಯಾಗಿದೆ. ಪರಿಸರ ಮಾನವನ ಮೇಲೆ ಮುನಿಸಿಕೊಂಡಿದೆ. ಇದಕ್ಕೆ ಕಾರಣ ಮಾನವನು ಪರಿಸರ ವಿನಾಶ ಮಾಡುತ್ತಿರುವುದು. ಕಾಡು ನಾಶ ಮಾಡಿ ಮನೆ ಕಟ್ಟುವುದು, ಗುಡ್ಡಗಾಡು ನಾಶ ಮಾಡಿ ರೆಸಾರ್ಟ್‌ ಕಟ್ಟುವುದು, ಮರಗಳನ್ನು ಕಡಿದು ವಿಶಾಲವಾದ ರಸ್ತೆ, ರೈಲ್ವೆ ಹಳಿಗಳನ್ನು ನಿರ್ಮಿಸುವುದು ಮುಂತಾದ ಕಾರಣಗಳಿಂದಾಗಿ ಮಣ್ಣು ಕುಸಿದು ಅತಿವೃಷ್ಟಿ ಉಂಟಾಗಿದೆ. ಆದ್ದರಿಂದ ಗಿಡ-ಮರಗಳನ್ನು ಹೆಚ್ಚಾಗಿ ಬೆಳೆಸಿ ಅವುಗಳ ಪಾಲನೆ-ಪೋಷಣೆ ಮಾಡಬೇಕು ಎಂದು ಹೇಳಿದರು.

ಸಿಂದಬಂದಗಿ ಗ್ರಾಮದ ಕಂಠಯ್ಯ ಸ್ವಾಮಿ ಮಾತನಾಡಿ, ಇಂದಿನ ಧರಣಿಯಲ್ಲಿ ಸಸಿಗಳ ವಿತರಣೆ ಸಮಯೋಚಿತವಾಗಿದೆ. ಎಲ್ಲರೂ ಗಿಡ-ಮರಗಳ ಮಹತ್ವ ಅರಿತು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಶಿವರಾಜ ತಿಪ್ಪಾರೆಡ್ಡಿ, ಚಂದ್ರಶೇಖರ ಪಾಟೀಲ, ಜಿಲಾನಿ ಪಟೇಲ್‌, ನಾಗಶೆಟ್ಟೆಪ್ಪ ಹಚ್ಚಿ, ಶಿವಶರಣಪ್ಪ ಪಾಟೀಲ ಬಂಬಳಗಿ, ದತ್ತಾತ್ರೆಯರಾವ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next