Advertisement

ಮನುಷ್ಯನ ಸ್ವಾರ್ಥಕ್ಕೆ ನಾಶವಾಗುತ್ತಿದೆ ಪರಿಸರ 

05:22 PM Apr 23, 2018 | Team Udayavani |

ರಾಣಿಬೆನ್ನೂರ: ಆಧುನಿಕ ಬದುಕಿನ ವ್ಯವಸ್ಥೆಯಲ್ಲಿ ನಮ್ಮ ನೆಲ-ಜಲ ಮತ್ತು ಪರಿಸರವನ್ನು ಹಾಳು ಮಾಡುತ್ತಿದ್ದೇವೆ.
ಇದರ ಪರಿಣಾಮ ಭವಿಷ್ಯದ ಬದುಕಿಗೆ ಮಾರಕವಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ, ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಬಿ.ಜಿ. ಪ್ರಮೋದ್‌ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಮದೋಡ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಪಂಚಾಯತ್‌ ಆಯೋಜಿಸಿದ್ದ ಭೂ ಸಂರಕ್ಷಣಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗಿಡ-ಮರಗಳು ಪ್ರತಿಯೊಬ್ಬ ಮನುಷ್ಯನ ಆರೋಗ್ಯಯುತ ಬದುಕಿಗೆ ಸಹಕಾರಿಯಾಗಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ
ಅವುಗಳನ್ನು ಉಳಿಸದೆ ಕಡಿದು ನಾಶ ಮಾಡುತ್ತಿದ್ದಾನೆ. ಇದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿ ಕಾಲ ಕಾಲಕ್ಕೆ ಸಮರ್ಪಕವಾಗಿ ಮಳೆ ಬಾರದೆ ಕ್ಷಾಮ  ದುರಿಸುವಂತಾಗಿದೆ. ಆದ ಕಾರಣ ಎಲ್ಲರೂ ತಮ್ಮ ಮನೆ ಸುತ್ತಲೂ ಮರ-ಗಿಡಗಳನ್ನು ಬೆಳೆಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡಿದಾಗ ಮಾತ್ರ ನಮ್ಮ ಉಳಿವಿದೆ ಎಂದರು.

ನ್ಯಾಯಾಧಿಧೀಶರಾದ ಪಿ. ಶಿವರಾಜ್‌ ಮಾತನಾಡಿ, ಸುಂದರ ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಮುಂದಾಗಬೇಕು. ಇದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಈ ನಿಟ್ಟಿನತ್ತ ಎಲ್ಲರೂ ಪರಿಸರ ರಕ್ಷಣೆಯಲ್ಲಿ ತೊಡಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ ಸೂರಣಗಿ, ಉಪಾಧ್ಯಕ್ಷ ಆರ್‌.ಡಿ. ಗೋರವರ್‌ ಇದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವನಗೌಡ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ದ್ವಿತೀಯ ದರ್ಜೆ ಸಹಾಯಕ ಎಸ್‌.ಬಿ. ಬಸಪ್ಪಳವರ್‌
ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next