Advertisement

ಮಾನವ ಜೀವ ಉಳಿಬೇಕಾದರೆ ಪರಿಸರ ಅಗತ್ಯ

04:32 PM Jun 06, 2019 | Suhan S |

ಚಿಂತಾಮಣಿ: ತಾಲೂಕಿನ ಜಂಗಮಶೀಗೆಹಳ್ಳಿ ಗ್ರಾಮದಲ್ಲಿ ಜೆಎಂಡಿ ಚಾರಿಟಬಲ್ ಟ್ರಸ್ಟ್‌ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ 3ನೇ ವರ್ಷದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

Advertisement

ಮೂವತ್ತು ವರ್ಷಗಳ ಹಿಂದೆ ಎಲ್ಲಿ ನೋಡಿದರೂ ದಟ್ಟವಾದ ಕಾಡು ಇತ್ತು. ಬಾವಿಗಳಲ್ಲಿ ಯಥೇಚ್ಛವಾದ ನೀರು ಸಿಗುತ್ತಿತ್ತು. ಸುತ್ತಲಿನ ಪರಿಸರವನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ನೀರನ್ನು ಹಾಕಿ ಮರಗಳನ್ನು ಪೋಷಣೆ ಮಾಡುತ್ತಿದ್ದರು. ಕುಂಟೆಗಳ ನೀರನ್ನು ಬಳಸಿ ತೋಪುಗಳನ್ನು ನಿರ್ಮಿಸಿದ್ದರು. ಆದರೆ ನಮ್ಮೂರಿನ ಹಲವು ಹಳೆಯ ಮರಗಳು ಇಂದು ಕಾಣುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆ. ಪ್ರತಿಯೊಬ್ಬರೂ ಮರಗಳನ್ನು ಬೆಳೆಸುವ ಅನಿವಾರ್ಯತೆ ಇದೆ.

ಉಳಿಮೆ ಮಾಡುವ ಉದ್ದೇಶದಿಂದ ಕಾಡನ್ನು ಕಡಿದು ನಾಶ ಮಾಡಲಾಗಿದೆ. ಅಂರ್ತಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿದಿನವೂ ಮರಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಇಲ್ಲವಾದರೆ ನಾವೂ ಉಳಿಯುವುದು ಕಷ್ಟ ಎಂದರು.

ಹಿರಿಯ ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಗಿಡ ನೆಡುವ ಕಾರ್ಯ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು. ಮನೆತನದ ಹೆಸರನ್ನು ಹೇಳುವ 80 ವರ್ಷದ ಮರಗಳಿದ್ದವು. ಈ ರೀತಿಯ ಮರಗಳು ಇಂದಿಲ್ಲ. ಹಿರಿಯರ ಪರಿಸರ ಪ್ರೇಮ ನಮಗೆ ಬೇಕಾಗಿದೆ. ಇಂದಿನ ಯುವ ಪೀಳಿಗೆಗೆ ಜೀವನಕ್ಕೆ ಅವಶ್ಯಕವಿಲ್ಲದ ಅಂಶಗಳು ಆದರ್ಶವಾಗುತ್ತವೆ. ಆದರೆ ಮರಗಳು ನೆಡುವ ಮತ್ತು ದೇವರಂತೆ ಅವುಗಳನ್ನು ಗೌರವಿಸುವ ಆದರ್ಶಗಳನ್ನು ಅವರಲ್ಲಿ ಬಿತ್ತಬೇಕು. ಮಾನವನಿಗೆ ಜೀವ ತುಂಬುವ ಮರಗಳನ್ನು ಜೀವನದ ಕಾಯಕವನ್ನಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಅರ್ತಜಲವನ್ನು ಹೆಚ್ಚು ಬಳಸುತ್ತಿರುವ ಪರಿಣಾಮವಾಗಿ ಬಿಸಿಲಿನ ತಾಪ ಹೆಚ್ಚಾ ಗಿದೆ. ತಂಪಾದ ಗಾಳಿಯ ಬದಲಾಗಿ ಬಿಸಿ ಗಾಳಿಯನ್ನು ಸೇವಿಸುವ ಸನ್ನಿವೇಶ ಉಂಟಾಗಿದೆ. ದಿನೇ ದಿನೆ ಭೂ ತಾಪ ಮಾನ ಹೆಚ್ಚಾಗುತ್ತಿದೆ. ಮನುಷ್ಯನೊಂದಿ ಗೆ ಪ್ರಾಣಿಗಳು ನೀರಿಗಾಗಿ ಪರದಾಡು ತ್ತಿದ್ದಾರೆ. ಕಾಡಿನಲ್ಲಿ ಜೀವಿಸಬೇಕಾದ ಪ್ರಾಣಿಗಳು ಮುಖ್ಯವಾಗಿ ಮಂಗಗಳು ನಾಡಿಗೆ ಬಂದು ಮನುಷ್ಯನ ಬದುಕಿಗೆ ಸವಾಲಾಗಿವೆ. ಹೀಗೆ ಮುಂದುವರೆದರೆ ಮನುಷ್ಯ ತನ್ನ ಜೀವ ಉಳಿಸಿಕೊಳ್ಳಲು ನೀರಿನ ಯುದ್ಧ ಮಾಡಬೇಕಾಗುತ್ತದೆ. ದುಸ್ಥಿತಿ ಯಿಂದ ಹೊರ ಬರಲು ಕಾಡನ್ನು ಬೆಳೆಸುವುದೇ ಪರಿಹಾರ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next