ಜೂನ್ ತಿಂಗಳು ಆರಂಭವಾದರೆ ಸಾಕು ಎಲ್ಲೆಡೆ ಕಣ್ಮನ ಸೆಳೆಯುವುದು ಹಚ್ಚ ಹಸುರಿನ ಪೃಕೃತಿ. ನೋಡುತ್ತ ನಿಂತರೆ ಮೈ ಮರೆಸುವ ಸೊಬಗು ಅದರದ್ದು. ಮಳೆಗಾಲ ಪ್ರಾರಂಭ ವಾಯಿತಲ್ಲ ಅದ ಕ್ಕಾಗಿ ಪರಿಸರದ ಸೌಂದರ್ಯ ದುಪ್ಪಟ್ಟಾಗಿದೆ ಎನ್ನುವ ನಮ್ಮ ಕಲ್ಪನೆ ತಪ್ಪು. ಏಕೆಂದರೆ ಇದಕ್ಕೆ ಕಾರಣ ಮಳೆರಾಯನಲ್ಲ, ತೋರಿಕೆಯ ಪರಿಸರ ಪ್ರೇಮಿಗಳು.
ಈ ಮಾಸದಲ್ಲಿ ಪೃಕೃತಿಗೆ ಅವರ ಕೊಡುಗೆ ಹೇಳ ತೀರದು. ಹೌದು ಜೂನ್‌ನಲ್ಲಿ ಅದೆಷ್ಟೋ ಪರಿಸರ ಪ್ರೇಮಿಗಳ ಜನ್ಮವಾಗಿ ಬಿಡುತ್ತದೆ. ಅವರು ಸದಾ ನಿಸರ್ಗ ಪೂಜಿತ ಮನೋಭಾವದವರೇನಲ್ಲ. ಕೇವಲ ಈ ತಿಂಗಳು 5ನೇ ತಾರೀಖೀನಂದು ಹುಟ್ಟಿಕೊಳ್ಳುತ್ತಾರೆ ಹಾಗೇ ಹೊಸ ಮಾಧ್ಯಮಗಳ ಸ್ಟೇಟಸ್ ಮೂಲಕ ಮಾಯವಾಗಿ ಬಿಡುತ್ತಾರೆ.
ಗಣೇಶ ಚತುರ್ಥಿಯಲ್ಲಿ ದೇವ ಶೀಗಣೇಶ ಮಣ್ಣಿನಲ್ಲಿ ತಯಾರಿ ಮಾಡಿ ನಂಬಿಕೆ ಇಟ್ಟು 5 ದಿನಗಳ ಕಾಲವಾದರು ದರ್ಶನ ನೀಡುತ್ತಾನೆ. ಆದರೆ ನಮ್ಮ ಈ ಪರಿಸರ ಪ್ರೇಮಿಗಳು ದರ್ಶನ ನೀಡುವುದು ವರ್ಷದಲ್ಲಿ ಕೇವಲ ಒಂದು ದಿನ ಮಾತ್ರ. ಅವರು ಹೀಗೇ ನಡೆದುಕೊಳ್ಳಲು ಕಾರಣಗಳಿವೆ. ಅವುಗಳೆಂದರೆ ಜನರು ತಮ್ಮನ್ನು ಪರಿಸರ ಪೋಷಕ ಎಂದು ಗುರುತಿಸಬೇಕು, ಇವರ ಈ ಕಾರ್ಯ ನೋಡಿ ನಾಲ್ಕು ಜನರಿಗೆ ಆದರ್ಶವಾಗಬೇಕು.
ತಾವು ನಿಸರ್ಗ ಉಳಿಸಿ ಬೆಳೆಸುವತ್ತ ಕಾರ್ಯ ಮಾಡುತ್ತಿದ್ದೇವೆ ಎಂಬ ಅಲ್ಪ ತೃಪ್ತಿ ಮನಸ್ಸಿಗೆ ಒದಗಬೇಕು. ಇದಿಷ್ಟೇ ಅವರ ಆಸೆಗಳು ಇದರ ಹೊರತು ಕಾಡು ಬೆಳೆಸಿ ನಾಡು ಉಳಿಸುವ ದೊಡ್ಡ ಮನೋ ಆಕಾಂಕ್ಷಿ ಅವರೇನಲ್ಲ. ಜೂನ್ 5 ರಂದು ನೆಡುವ ಸಸಿ ಅಥವಾ ಗಿಡ ಎರಡು ಮೂರು ದಿನಗಳಲ್ಲಿ ಪೋಷಣೆ ಸಿಗದೆ ಸತ್ತರೂ ಪರವಾಗಿಲ್ಲ, ಪ್ರತೀ ವರ್ಷ ಇದೆ ಕಾಯಕವನ್ನು ಬಿಡದೆ ಸ್ಟೇಟಸ್ ಪರಿಸರ ಪ್ರೇಮಿಗಳು ಮುಂದುವರಿಸುತ್ತಾರೆ.
ಎಲ್ಲರೂ ಗಿಡ ಮರ ಬೆಳೆಸಿ ನಿರಂತರವಾಗಿ ಪ್ರಕೃತಿ ಕಾಳಜಿಯನ್ನೇ ಮಾಡಿ ಎಂದೇನು ಹೇಳುತ್ತಿಲ್ಲ. ಸಸಿ ನೆಡದೆ ಹೋದರು ಪರವಾಗಿಲ್ಲ ನೆಟ್ಟಂತೆ ಮಾಡಿ ನಾಶ ಮಾಡುವುದು ಬೇಡ. ಅಂತಹ ಕಾರ್ಯಗಳಲ್ಲಿ ಭಾಗಿ ಆಗುವುದು ಬೇಡ. ಜನರು ಇಂತಹ ಬೇಡದ ಬಂಡು ಕೆಲಸಗಳನ್ನು ಮಾಡುವ ಬದಲು ನಿಜವಾಗಿ ಪರಿಸರದ ಪೋಷಣೆ ಮಾಡುವವರು ಹಾಗೂ ಪರಿಸರ ಹೋರಾಟಗಾರರಿಗೆ ಪ್ರೋತ್ಸಾಹ ನೀಡಬೇಕು.
ನಿಸರ್ಗದ ಋಣ ಕೆಲವು ಮಟ್ಟಿಗಾದರೂ ತಿರಿಸಿದಂತಾಗುತ್ತದೆ. ಇಲ್ಲ ಜೀವ ನಿಡಿದ ತಾಯಿಯಂತೆ ಜೀವನಕ್ಕೇ ಆಧಾರ ಒದಗಿಸಿದ ನಿಸರ್ಗ ಮಾತೆಯನ್ನು ಗೌರವಿಸುತ್ತೇನೆ ಎಂಬ ಮನೋಭಾವವಿದ್ದರೆ ಪೊಳ್ಳು ಪರಿಸರ ಪ್ರೇಮ ಬಿಟ್ಟು ಒಂದಾದರು ಗಿಡ ನೇಟ್ಟು, ನಿತ್ಯ ಪೋಷಣೆ ಮಾಡುವುದು ಒಳಿತು.
ಇದರ ಜತೆಗೆ ಪರಿಸರ ಮಾಲಿನ್ಯ ಮಾಡುತ್ತಿರುವ ನಮ್ಮೆಲ್ಲ ಕಾರ್ಯಗಳನ್ನು ಕಡಿತಗೊಳಿಸಬೇಕು, ನಮ್ಮ ಸುತ್ತ ಮುತ್ತಲಿನ ಜನರಿಗೆ ನಿಸರ್ಗ ಕಾಳಜಿ ಅಗತ್ಯತೆ ಕುರಿತು ಜಾಗೃತಿ ಮೂಡಿಸಬೇಕು. ಈ ವರ್ಷದ ಪರಿಸರ ದಿನಾಚರಣೆ ಪ್ರಯುಕ್ತವಾಗಿ ಇನ್ನು ಮುಂದೆ ತೋರಿಕೆ ಜೀವನ ಬಿಟ್ಟು ಭೂ ತಾಯಿಯ ನೈಸರ್ಗಿಕ ಸಂಪತ್ತು ಸಂರಕ್ಷಿಸುವಲ್ಲಿ ಕೆಲವೊಂದು ಕಾರ್ಯಗಳನ್ನಾದರೂ ಮಾಡುವ ಭಾವನೇ ಬೆಳೆಸಿಕೊಳ್ಳಬೇಕಾಗಿದೆ. ಇದು ಪ್ರಕೃತಿಗೆ ಅವಲಂಬಿತರಾದ ನಮ್ಮ ಪ್ರತಿಯೊಬ್ಬರ ಕರ್ತವ್ಯ.
-ಪೂಜಾ ಹಂದ್ರಾಳ
ಶಿರಸಿ