Advertisement

ಸಸಿ ನೆಟ್ಟು ಮಕ್ಕಳಂತೆ ಪೋಷಿಸಿ: ಹೊಸಮನಿ

06:07 AM Jun 08, 2020 | Suhan S |

ಕೆರೂರ: ನೆಟ್ಟ ಸಸಿಗಳ ಲಾಲನೆ-ಪೋಷಣೆ ಜತೆಗೆ ಅವುಗಳನ್ನು ಸ್ವಂತ ಮಕ್ಕಳಂತೆ ಸ್ವೀಕರಿಸಿ ಬೆಳೆಸುವ ಮನೋಭಾವ ರೂಢಿಸಿಕೊಂಡಾಗ ಮಾತ್ರ ಪರಿಸರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಹೇಳಿದರು.

Advertisement

ಶುಕ್ರವಾರ ನೆಹರು ನಗರದ ಬಳಿ ಸ್ಮಶಾನ ಭೂಮಿಯಲ್ಲಿ ಪಪಂ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಮಾತನಾಡಿ, ಪಟ್ಟಣದ ಮೂರು ಸ್ಮಶಾನ ಭೂಮಿ ಹಾಗೂ ವ್ಯಾಪ್ತಿಯ ಬಯಲು ಜಾಗೆಗಳಲ್ಲಿ ಈ ದಿನ ಪಂಚಾಯ್ತಿ ವತಿಯಿಂದ ಒಟ್ಟು 500 ಸಸಿ ನೆಡಲಾಗಿದ್ದು, ನಾಲ್ಕೈದು ದಿನಕ್ಕೊಮ್ಮೆ ನೀರು, ಗೊಬ್ಬರ ಜೊತೆಗೆ ಜಾನುವಾರುಗಳು ತಿನ್ನದಂತೆ ಮುಳ್ಳು, ಕಂಟಿಯ ಬೇಲಿ ಹಾಕಿ ರಕ್ಷಿಸ ಲಾಗುತ್ತದೆ ಎಂದರು.

ಈ ವೇಳೆ ಎಸ್‌.ವಿ. ಮಾಮನಿ, ಮೀನಾಕ್ಷಿ ಶಿರಗುಂಪಿ, ಶಿವಾನಂದ ಶೌರಿ, ಅಶ್ವಥ ರಂಗನಗೌಡ್ರ, ಗೀತಾ ಆಳಗುಂದಿ, ಬಸವರಾಜ ಕಟ್ಟಿಮನಿ, ರಾಚಣ್ಣ ತೋಟಗೇರ, ಚೌಕಿಮಠ, ಎಂ.ಆರ್‌. ಕೆರೂರು, ಸಂಗಮೇಶ ಮಾದರ, ಸದಾನಂದ ತೋಟಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next