Advertisement

ಉದ್ಯಮಿಗಳು ಎದೆಗುಂದಬಾರದು

01:53 AM Aug 02, 2019 | Team Udayavani |

ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ. ಉದ್ದಿಮೆಯಲ್ಲಿನ ವೈಫ‌ಲ್ಯಗಳನ್ನು ಹೆಚ್ಚು ನಂಬಿಕೊಳ್ಳಬಾರದು ಮತ್ತು ಅದರಿಂದ ಎದೆಗುಂದಬಾರದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ದಿವಾಳಿ ವಿಧೇಯಕ ಮೇಲಿನ ಚರ್ಚೆ ವೇಳೆ ಕೆಫೆ ಕಾಫಿ ಡೆ ಮಾಲೀಕ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆ ಘಟನೆ ಉಲ್ಲೇಖೀಸಿ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಉದ್ದಿಮೆ ಕ್ಷೇತ್ರದಲ್ಲಿ ವೈಫ‌ಲ್ಯಗಳೇ ಉಂಟಾಗುತ್ತವೆ ಎಂಬಂಥ ನಂಬಿಕೆ ಹುಟ್ಟು ಹಾಕಬಾರದು ಅಥವಾ ಅದರಿಂದ ಎದೆಗುಂದಬಾರದು. ಅವರ ಸಮಸ್ಯೆಗಳಿಗೆ ತಿದ್ದುಪಡಿ ವಿಧೇಯಕದಲ್ಲಿ ಪರಿಹಾರ ಕಂಡುಕೊಳ್ಳುವಂಥ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ. ಟಿಡಿಪಿಯ ಜಯದೇವ ಗಲ್ಲಾ, ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ, ಬಿಜು ಜನತಾ ದಳದ ಪಿನಾಕಿ ಮಿಶ್ರಾ ಅವರೂ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ ಆಘಾತ ವ್ಯಕ್ತಪಡಿಸಿದರು. 2024ರ ವೇಳೆಗೆ ದೇಶದ ಅರ್ಥ ವ್ಯವಸ್ಥೆ 5 ಲಕ್ಷಕೋಟಿ ಡಾಲರ್‌ ಮೌಲ್ಯಕ್ಕೆ ಏರಿಸುವ ಉದ್ದೇಶ ಹೊಂದಿರುವ ಸರ್ಕಾರಕ್ಕೆ ಈ ಬೆಳವಣಿಗೆ ಒಳ್ಳೆಯದಲ್ಲ ಎಂದರು.

ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಟಿಎಂಸಿ ಸಂಸದ ಸುಖೇಂದು ಶೇಖರ್‌ ರಾಯ್‌, ಸರ್ಕಾರ ಬಂಡವಾಳ ಹೂಡಿಕೆದಾರರ ವಿಶ್ವಾಸ ಗೆಲ್ಲುವ ಪ್ರಯತ್ನ ಮಾಡಬೇಕು. ಸಿದ್ಧಾರ್ಥರ ಸಾವು ದೇಶದ ಕಾರ್ಪೊರೇಟ್ ವಲಯದಲ್ಲಿ ಆಘಾತ ತಂದೊಡ್ಡಿದೆ. ಸಿದ್ಧಾರ್ಥ ಬರೆದಿದ್ದಾರೆ ಎನ್ನಲಾಗಿರುವ ಪತ್ರದಲ್ಲಿನ ಅಂಶಗಳು ಆಘಾತಕಾರಿಯಾಗಿವೆ. ಸರ್ಕಾರ ಉದ್ದಿಮೆ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಇರುವ ನಿಯಮ ಸಡಿಲಿಸಿ ಸುಲಭ ವಾತಾವರಣ ಮಾಡಿದ್ದರೂ, 5 ಸಾವಿರ ಮಂದಿ ಬಿಲಿಯನೇರ್‌ಗಳು ದೇಶ ತೊರೆದಿದ್ದಾರೆ ಎಂಬ ವರದಿಗಳು ಇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next