Advertisement

ಉದ್ಯಮಿಗಳಿಗೆ ಬೇಕಿದೆ ಮಾರಾಟದ ಕೌಶಲ್ಯ

12:35 PM Jan 06, 2017 | Team Udayavani |

ದಾವಣಗೆರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳು  ಉತ್ಪನ್ನ ತಯಾರಿಕೆ ಜೊತೆಗೆ ಮಾರಾಟ ಕೌಶಲ್ಯ ಬೆಳೆಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಸಲಹೆ ನೀಡಿದ್ದಾರೆ. 

Advertisement

ರೇಣುಕಾ ಮಂದಿರದಲ್ಲಿ ಗುರುವಾರ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ, ಅತಿಸಣ್ಣ ಸಚಿವಾಲಯ ಆಯೋಜಿಸಿದ್ದ ರಾಜ್ಯಮಟ್ಟದ ಉದ್ಯಮದಾರರ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಉದ್ಯಮಿಗಳು ಉತ್ಪಾದನೆಗಷ್ಟೇ ಗಮನ ಕೊಡದೆ ಮಾರಾಟದ ಕೌಶಲ್ಯ ಬೆಳೆಸಿಕೊಳ್ಳಬೇಕಾಗಿದೆ. 

ಆಗ ಮಾತ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನೆಲೆಗೊಳ್ಳಬಹುದೆಂದು ಎಂದರು. ಸರ್ಕಾರ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆ, ಸವಲತ್ತು ಒದಗಿಸುತ್ತಿದೆ. ಈ ಯೋಜನೆಗಳ ಜ್ಞಾನ ಹೊಂದಿದರೆ ಯಶಸ್ಸು ಕಂಡುಕೊಳ್ಳುವುದು ಸುಲಭವಾಗಲಿದೆ.

ಇಂದು ಕಾರ್ಯಕ್ರಮ ಆಯೋಜಿಸಿರುವ ಇಲಾಖೆ ಮುಂದೆ ಇಲ್ಲಿನ ಉದ್ದಿಮೆದಾರರನ್ನು ಅನ್ಯ ಜಿಲ್ಲೆ, ರಾಜ್ಯಗಳ ಉದ್ದಿಮೆದಾರರ ಜೊತೆ ಮುಖಾ ಮುಖೀ ಮಾಡಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು. ಎಂಎಸ್‌ಎಂಇ ಸಂಸ್ಥೆಯ ಉಪನಿರ್ದೇಶಕ ಆನಂದ ಮೂರ್ತಿ ಮಾತನಾಡಿ,

ಭಾರತ ಸರ್ಕಾರ ಇಂತಹ ಸಣ್ಣ ಉದ್ದಿಮೆದಾರರ ಮಾರಾಟದ ಸಮಸ್ಯೆ ಗಮನದಲ್ಲಿಟ್ಟುಕೊಂಡು 2012ರಲ್ಲಿ ಸರ್ಕಾರದ ಸಾಮ್ಯದ ಎಲ್ಲಾ ಉದ್ದಿಮೆ ಸಂಸ್ಥೆಗಳು ತಮ್ಮ ಅಗತ್ಯತೆಯ ಶೇ.20 ರಷ್ಟು ಉತ್ಪನ್ನಗಳನ್ನು ಇಂತಹ ಸಂಸ್ಥೆಗಳಿಂದಲೇ ಖರೀದಿಸಬೇಕೆಂದು ಕಾಯ್ದೆ ಮಾಡಿದೆ.

Advertisement

ಹಾಗಾಗಿ ಪ್ರತಿಷ್ಠಿತ ಕಂಪನಿಗಳಾದ ಎಚ್‌ಎಎಲ್‌, ಬಿಇಎಲ್‌, ಬಿಎಚ್‌ ಇಎಲ್‌, ರೈಲ್ವೆ ಮುಂತಾದ ಸಂಸ್ಥೆಗಳು ಇಂತಹ ಉದ್ದಿಮೆದಾರರಿಂದಲೇ ಖರೀದಿಸುತ್ತಿವೆ ಎಂದರು. ಪ್ರಧಾನ ಮಂತ್ರಿಯವರ ಮತ್ತೂಂದು ಮಹಾತ್ವಾಕಾಂಕ್ಷಿ ಯೋಜನೆ ಮುದ್ರಾ ಯೋಜನೆ. 

ಇದು ಬಹು ಉಪಯೋಗಿ ಯೋಜನೆಯಾಗಿದ್ದು ಇದರಲ್ಲಿ 50 ಸಾವಿರ ದಿಂದ 10 ಲಕ್ಷದವರೆಗೆ ಯಾವುದೇ ರೀತಿಯ ಕೋಲ್ಯಾಟರಲ್‌ ಸೆಕ್ಯುರಿಟಿ ಇಲ್ಲದೇ ಸಾಲ ಮಂಜೂರು ಮಾಡುವ ಯೋಜನೆಯಾಗಿದೆ. ನಮಗೆ ಹಲವಾರು ಮಂದಿ ಅಧಿಧಿಕಾರಿಗಳು ದಾರಿ ತಪ್ಪಿಸುತ್ತಾರೆ. ಯೋಜನೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳಿವೆ.

ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಸುಮಾರು 3 ಲಕ್ಷ 60 ಸಾವಿರದಷ್ಟು ಮಂದಿ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು. ಸುಮಾರು 350 ವಿವಿಧ ರೀತಿಯ ಉದ್ಯಮಗಳನ್ನು ನಡೆಸಲು ಈ ಯೋಜನೆಯಲ್ಲಿ ಅವಕಾಶವಿದ್ದು ಈ ಯಾವ ಉದ್ಯಮಗಳಿಗೂ ಕೋಟಿಗಟ್ಟಲೆ ಬಂಡವಾಳ ಬೇಕಾಗುವುದಿಲ್ಲ. 

μನಾಯಿಲ್‌, ಸೋಪು, ಡೆಟಾಯಿಲ್‌ ಮುಂತಾದವುಗಳನ್ನು ತಯಾರಿಸಿ ದೊಡ್ಡ ದೊಡ್ಡ ಕಂಪನಿಗಳಿಗೆ ಸರಬರಾಜು ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. ಎಂಎಸ್‌ಎಂಇ ಸಂಸ್ಥೆಯ ಅನುಕುಮಾರ್‌, ಜಿಲ್ಲಾ ಸಣ್ಣ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಶಂಭುಲಿಂಗಪ್ಪ,

ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ. ಯರ್ರಿಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್‌ ನಾರಾಯಣ್‌, ಎಂ. ನಾಗೇಂದ್ರ ಪ್ರಸಾದ್‌, ಪ್ರೇರಣಾ ಮಹಿಳಾ ಸಂಸ್ಥೆಯ ಅಧ್ಯಕ್ಷ ನಾಗರತ್ನ ಜಗದೀಶ್‌ ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next