Advertisement

ಸಿಎಂ ಪುತ್ರ ಉದ್ಯಮಿ ಭರತ್ ಬೊಮ್ಮಾಯಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

09:47 PM Oct 07, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ, ಯುವ ಉದ್ಯಮಿ ಭರತ್ ಬಿ. ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್ – 2022 ಲಭಿಸಿದೆ.

Advertisement

ಅಶ್ವ ಎನರ್ಜಿ ಮತ್ತು ವಾಲ್ಟೆಕ್ ಎಂಬ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಭರತ್ ಬಿ ಬೊಮ್ಮಾಯಿ ಅವರು ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ (Entrepreneur for the year 2022) ಹೊರಹೊಮ್ಮಿದ್ದು 2022 ರ – ಟೈಟಾನ್ ಬಿಸಿನೆಸ್ ಅವಾರ್ಡ್: ಸೀಸನ್ 2 ರಲ್ಲಿ ನಿರ್ಣಾಯಕ ವಿಜಯವನ್ನು ಸಾಧಿಸಿದ್ದಾರೆ.

ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಟೈಟಾನ್ ಬಿಸಿನೆಸ್ ಅವಾರ್ಡ್ ಆಯೋಜಕರಾದ ಇಂಟರ್ನ್ಯಾಷನಲ್ ಅವಾರ್ಡ್ಸ್ ಅಸೋಸಿಯೇಟ್ (IAA), ವಿಶ್ವದಾದ್ಯಂತ ಬಂದಿದ್ದ ಸಾವಿರಾರು ಪ್ರವೇಶಗಳನ್ನು ಪರಿಶೀಲಿಸಿದ ನಂತರ, ಸ್ಪರ್ಧೆಯ ತೀರ್ಪುಗಾರರು ಭರತ್ ಬಿ ಬೊಮ್ಮಾಯಿ (ಅಶ್ವ ಎನರ್ಜಿ ಮತ್ತು ವಾಲ್ಟೆಕ್) ಅವರ ಪ್ರವೇಶವನ್ನು (ಗೋಲ್ಡ್) ಟೈಟಾನ್ ಪ್ರಶಸ್ತಿಗೆ ಅರ್ಹರು ಎಂದು ಪರಿಗಣಿಸಿದ್ದಾಗಿ ತಿಳಿಸಿದ್ದಾರೆ.

2022 ರ ಟೈಟಾನ್ ಬಿಸಿನೆಸ್ ಅವಾರ್ಡ್ಸ್‌: ಸೀಸನ್ 2ರ ಸ್ಪರ್ಧೆಗೆ ಯುಎಸ್ಎ, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ, ಕೆನಡಾ, ಚೀನ, ಭಾರತ, ಓಮನ್‌, ಫಿಲಿಪೈನ್ಸ್‌, ಪೋರ್ಚುಗಲ್‌, ಯುಎಇ ಸೇರಿದಂತೆ ಸುಮಾರು 55 ದೇಶಗಳಿಂದ 1000 ಹೆಚ್ಚು ಪ್ರವೇಶಗಳು ಬಂದಿದ್ದವು. ವಾಣಿಜ್ಯೋದ್ಯಮಿಗಳು, SMEಗಳು ಮತ್ತು ದೊಡ್ಡ ಸಂಸ್ಥೆಗಳಿಗೆ ಸ್ಪರ್ಧೆ ಮಾಡುವ ಪ್ರವೇಶವನ್ನು ತೆರೆದಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲ ಉದ್ಯಮಗಳಿಗೂ ಪ್ರವೇಶವನ್ನು ಮುಕ್ತವಾಗಿ ತೆರೆಯಲಾಗಿತ್ತು.

ವಿಶ್ವದಾದ್ಯಂತ ಇರುವ ಉದ್ಯಮಿ ಮತ್ತು ಸಂಸ್ಥೆಗಳ ಸಾಧನೆಯನ್ನು ಗುರುತಿಸುವ ಏಕಮಾತ್ರ ಉದ್ದೇಶದೊಂದಿಗೆ ಟೈಟಾನ್‌ ಬ್ಯುಸಿನೆಸ್‌ ಅವಾರ್ಡ್‌ ಅನ್ನು ನೀಡಲಾಗುತ್ತದೆ. ಸ್ಪರ್ಧಿಗಳನ್ನು ಮಾರುಕಟ್ಟೆಯ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಎಂದು ವಿಭಾಗೀಕರಿಸದೇ, ಅವರು ಗಳಿಸಿದ ನಿಷ್ಪಕ್ಷಪಾತ ಶ್ರೇಷ್ಠತೆ ಮಟ್ಟದಿಂದ ಮಾತ್ರ ಗೌರವಿಸಲಾಗುತ್ತದೆ. ಈ ಹಂತದಲ್ಲಿ ಅರ್ಹತೆ ಪಡೆದವರು ಮಾತ್ರ ಗೌರವಾನ್ವಿತ TITAN ಗಳಾಗಬಹುದು.

Advertisement

ಸ್ಪರ್ಧೆಯಲ್ಲಿ ಅನುಭವಿ ವೃತ್ತಿಪರರು ಜ್ಯೂರಿಗಳು ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತ ಮತ್ತು ಕಟ್ಟುನಿಟ್ಟಾದ ಮಾನದಂಡಗಳನ್ನು ಅನುಸರಿಸಿದರು. ಅತ್ಯುತ್ಕೃಷ್ಟ ಪ್ರವೇಶಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಜವಾಬ್ದಾರಿಯನ್ನು ಜ್ಯೂರಿಗಳಿಗೆ ನೀಡಲಾಗಿತ್ತು. ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಲು TITAN ಪ್ರಾಮುಖ್ಯತೆಯನ್ನು ನೀಡಿದ್ದು, ಪ್ರವೇಶಗಳ ತೀರ್ಪು ನೀಡಲು 15 ದೇಶಗಳಿಂದ ಸುಮಾರು 27 ಜ್ಯೂರಿಗಳನ್ನು ನೇಮಿಸಲಾಗಿತ್ತು.

ಈ ಸ್ಪರ್ಧೆಗೆ ಅನೇಕ ಗೌರವಾನ್ವಿತ ಕಂಪನಿಗಗಳು ಪ್ರವೇಶ ಪಡೆದಿದ್ದವು.‌ ವಿಜೇತರ ಈ ನಿರ್ದಿಷ್ಟ ಗುಂಪಿನಲ್ಲಿ RLM Underground, Gravity Global, InnoverAisera, OYO Homes and Hotels Private Limited, Lazarev.agency, Bharat Aluminium Company Ltd., Onit, Ambiq, Paycor, Honeywell, Ellucian, ಮತ್ತು Fifth & Cor ನಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳೂ ಸೇರಿದೆ.

ಪ್ರತಿಷ್ಠಿತ ಸಂಸ್ಥೆಗಳ ನಡುವೆ ಸ್ಪರ್ಧೆಯ ಎಲ್ಲ ಕಠಿಣ ಹಂತಗಳನ್ನು ದಾಟಿದ ಭರತ್ ಬಿ ಬೊಮ್ಮಾಯಿ ಅವರು 2022 ರ – ಟೈಟಾನ್ ಅವಾರ್ಡ್: ಸೀಸನ್ 2 ರಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next