Advertisement

ಕಂಚಿ ಶ್ರೀ ಬೃಂದಾವನ ಪ್ರವೇಶ

08:15 AM Mar 02, 2018 | |

ಚೆನ್ನೈ: ಬುಧವಾರ ಬ್ರಹೆ„ಕ್ಯರಾದ ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಯವರನ್ನು ಅವರ ಇಚ್ಛೆಯಂತೆಯೇ ಬೃಂದಾವನದಲ್ಲಿ, ಅವರ ಗುರುಗಳ ಸಮಾಧಿಯ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ. ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಸಮಾಧಿ ಸಮೀಪ ಸಕಲ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಕುಳಿತ ಸ್ಥಿತಿಯಲ್ಲೇ ಸಮಾಧಿ ಮಾಡಲಾಗಿದೆ. 7 ಅಡಿ ಅಗಲ ಹಾಗೂ 7 ಅಡಿ ಉದ್ದದ ಸಮಾಧಿಯನ್ನು ನಿರ್ಮಿಸಿ, ಲವಣ, ಶ್ರೀಗಂಧ ಮತ್ತು ಮರಳನ್ನು ತುಂಬಲಾಗಿತ್ತು. ಸಂಸ್ಕಾರ ಕ್ರಿಯೆ ಬೆಳಗ್ಗೆ 7.45ರಿಂದ ಆರಂಭವಾಗಿ ಸುಮಾರು ಮೂರೂವರೆ ತಾಸು ನಡೆದಿದೆ.

Advertisement

ಈ ವೇಳೆ ತಮಿಳುನಾಡು ರಾಜ್ಯಪಾಲ ಭನ್ವರಿಲಾಲ್‌ ಪುರೋಹಿತ್‌ ಹಾಗೂ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು. ಆರಂಭಿಕ ವಿಧಿ ವಿಧಾನಗಳನ್ನು ವೀಕ್ಷಿಸಿದ್ದ ಭಕ್ತರಿಗೆ, ಅಂತಿಮ ಹಂತದ ವಿಧಿ ವಿಧಾನಗಳ ವೀಕ್ಷಣೆಗೆ ಅವಕಾಶ ನೀಡದಿರುವುದು ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು. ಅಂತಿಮ ಹಂತದ ವಿಧಿ ವಿಧಾನಗಳನ್ನು ನಡೆಸುವ ವೇಳೆ ಪರದೆಯನ್ನು ಇಳಿಬಿಡಲಾಗಿತ್ತು.

ಅವರ ಬೋಧನೆ ಅನುಸರಿಸಿ: ದಿಗªರ್ಶನದ ಪ್ರಕಾಶ ತನ್ನ ಸ್ಥಳವನ್ನು ಬದಲಿಸಿದೆ. ಅವರ ಪ್ರವಚನವನ್ನು ಭಕ್ತರು ಅನುಸರಿಸಿ, ಧಾರ್ಮಿಕ  ಜೀವನ ನಡೆಸಬೇಕು. ಅವರು ಸರ್ವರನ್ನು ಸಮಾನವಾಗಿ ಕಂಡಿದ್ದರು. ಎಂದಿಗೂ ಜನರನ್ನು ತಾರತಮ್ಯದಿಂದ ನೋಡಲಿಲ್ಲ ಎಂದು ಕಿರಿಯ ಸ್ವಾಮೀಜಿ ಶ್ರೀ ವಿಜಯೇಂದ್ರ ಸರಸ್ವತಿ ಹೇಳಿ ದ್ದಾರೆ. ಶ್ರೀ ಜಯೇಂದ್ರ ಸರಸ್ವತಿಯವರ ಬ್ರಹೆ„ಕ್ಯ ನಂತರದಲ್ಲಿ ಈಗ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಪೀಠಾಧ್ಯಕ್ಷರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next