Advertisement
ವಸ್ತುಪ್ರದರ್ಶನ ಮಂಟಪ ದಲ್ಲಿ 197 ಮಳಿಗೆ ಹೊರತು ಪಡಿಸಿ ಮುಖ್ಯ ದ್ವಾರದಿಂದ ವಸತಿ ಗೃಹ ಸಾಕೇತವರೆಗೂ ರಸ್ತೆಯ ಇಕ್ಕೆಲಗಳಲ್ಲಿ ತಿಂಡಿ-ತಿನಿಸು, ಹಣ್ಣುಗಳು, ಮಂಜುನಾಥ ಸ್ವಾಮಿ ಭಾವಚಿತ್ರ ಮಾರಾಟ, ಮನೆ ಬಳಕೆ ವಸ್ತುಗಳು ಸಹಿತ 300ಕ್ಕೂ ಹೆಚ್ಚು ಮಳಿಗೆಗಳು ಆಕರ್ಷಿಸುತ್ತಿವೆ.
ಮನೋರಂಜನೆಗಾಗಿ ಅಮೃತ ವರ್ಷಿಣಿ ಸಭಾಭವನ ಹಿಂಭಾಗ ಡ್ರ್ಯಾಗನ್, ಕೊಲಂಬಸ್, ಡ್ಯಾನ್ಸ್ ಕಾರ್, ಜೈಂಟ್ ವೀಲ್ ಮತ್ತಿತರ ಗೇಮ್‌ಗಳು ಮಕ್ಕಳು-ಹಿರಿಯರನ್ನು ಆಕರ್ಷಿಸುತ್ತಿವೆ. ಅನ್ನದಾಸೋಹ
ಶ್ರೀಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ನ. 24ರಂದು 25ರಿಂದ 30 ಸಾವಿರ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 25ರಂದು 40-45 ಸಾವಿರ, 26ರಂದು 1.50 ಲಕ್ಷಕ್ಕೂ ಹೆಚ್ಚು ಭಕ್ತರ ನಿರೀಕ್ಷೆ ಹೊಂದಲಾಗಿದೆ ಎಂದು ಅನ್ನಛತ್ರದ ಮೇಲುಸ್ತುವಾರಿ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿ¨ªಾರೆ.
Related Articles
ನ. 25, 26ರಂದು ಓರ್ವ ವೃತ್ತ ನಿರೀಕ್ಷಕರು, 210 ಹೋಮ್ ಗಾರ್ಡ್, 210 ಪೊಲೀಸ್, 20 ಎಎಸ್‌ಐ , 1 ಅಗ್ನಿಶಾಮಕ ವಾಹನ, ಜಿಲ್ಲಾ ಮೀಸಲು ಪಡೆಯ 15 ಪೊಲೀಸರ ತಂಡ, 15 ಮಂದಿ ಸಂಚಾರಿ ಪೊಲೀಸ್ ತಂಡ ಕಾರ್ಯ ನಿರ್ವಹಿಸಲಿದೆ. ಡಿಸಿಎಂ ಡಾ| ಅಶ್ವತ್ಥ ನಾರಾಯಣ ಅವರು ಆಗಮಿಸುವ ಹಿನ್ನೆಲೆ 26ರಂದು ಹೆಚ್ಚುವರಿ ಬಂದೋಬಸ್ತ್ ಇರಲಿದೆ.
- ಸಂದೇಶ್ ಪಿ.ಜಿ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು.
Advertisement