Advertisement

ಇ-ಪಾಸ್ ಇಲ್ಲದೇ ರಾಜ್ಯಕ್ಕೆ ಅಕ್ರಮ ಪ್ರವೇಶ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆ?

05:59 PM May 15, 2020 | keerthan |

ಮಣಿಪಾಲ: ಇ-ಪಾಸ್ ಇಲ್ಲದೇ ಅನ್ಯ ರಾಜ್ಯಗಳಿಂದ ಅಕ್ರಮ ಪ್ರವೇಶ ಮಾಡುವವರ ವಿರುದ್ದ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ

Advertisement

ನಟರಾಜನ್ ಸುರೇಶ್: ಇಲ್ಲಿ ಬಹಳಷ್ಟು ಜನ ಬಡವರು ಬದುಕು ಕಟ್ಟಿಕೊಳ್ಳಲು ರಾಜ್ಯ ಬಿಟ್ಟು ರಾಜ್ಯ ವಲಸೆ ಹೋಗುತ್ತಾರೆ..ಅವರಿಗೆ ನಿಮ್ಮ ಇ- ಪಾಸ್ ಅಂತ ಯಾಕೆ ತೊಂದರೆ ಕೊಡುತ್ತೀರಿ.? ಸರಿಯಾಗಿ ತಪಾಸಣೆ ಮಾಡಿ ಕಳುಹಿಸಿ.

ಅಕ್ಷಯ್ ಘೋರ್ಪಡೆ ಸರ್ಕಾರ್;  ಜನ ಸಾಮಾನ್ಯರಾದರೂ ಕಠಿಣವಾದ ಕ್ರಮ ಕೈಗೊಳ್ಳಿ.

ವಿಶ್ವ ಪಡ್ನೂರ್: ತವರು ರಾಜ್ಯಕ್ಕೆ ಹೋಗಲು ಇ ಪಾಸ್. ಅದು ನಾಲ್ಕು ದಿನಗಳಿಗೆ ಮಾತ್ರ. ಏನಿದು ವಿಪರ್ಯಾಸ.

ಅನಿಲ್ ಕುಮಾರ್: ಇ ಪಾಸ್ ನ ಯಾವುದೇ ಅಗತ್ಯವಿಲ್ಲ. ಯಾಕೆಂದರೆ ಎಲ್ಲರೂ ಭಾರತೀಯರು.

Advertisement

ಭರತ್: ಹೌದು ತಡೆಯಬೇಕು. ಈಗ ನಿಯಂತ್ರಣದಲ್ಲಿರುವ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವುದು ಬೇಡ. ಅವರು ಎಲ್ಲಿದ್ದಾರೋ ಅಲ್ಲಿಯೇ ತಪಾಸಣೆ ನಡೆಸಿ ಉಳಿಸಿಕೊಳ್ಳುವ ವ್ಯವಸ್ಥೆ ಆಗಲಿ.

Advertisement

Udayavani is now on Telegram. Click here to join our channel and stay updated with the latest news.

Next