Advertisement

ಸರ್ಕಾರಿ ಶಾಲೆಗೆ ಮಕ್ಕಳ ದಾಖಲಿಸಿ: ಯುವರಾಜ್‌

05:28 PM Jul 17, 2021 | Team Udayavani |

ಮೊಳಕಾಲ್ಮೂರು: ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಸೇರಿದಂತೆ ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ಮೂಲ ಸೌಲಭ್ಯ ಲಭ್ಯವಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್‌ ನಾಯ್ಕ ತಿಳಿಸಿದ್ದಾರೆ.

Advertisement

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಶಾಲಾ ದಾಖಲಾತಿ ಆಂದೋಲದ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಮಕ್ಕಳದಾಖಲಾತಿಗೆ ಉಪನಿರ್ದೇಶಕರು, ಜಿಲ್ಲಾ ಸಂಘದವರು ಹೆಚ್ಚಿನ ಪ್ರೋತ್ಸಾಹ ನೀಡಿರುವುದರಿಂದ ಮುಂದಿನದಿನಗಳಲ್ಲಿ ಕಳೆದ ಬಾರಿಗಿಂತಲೂಈ ವರ್ಷವೂ ಸುಮಾರು ಒಂದನೇ ತರಗತಿಗೆ 3 ರಿಂದ 4 ಸಾವಿರ ಮಕ್ಕಳನ್ನುದಾಖಲಾತಿ ಹೆಚ್ಚಿಸಬೇಕಾಗಿದೆ. ಶಾಲಾ ಮಕ್ಕಳ ದಾಖಲಾತಿ ರಥಯಾತ್ರೆ ಮೂಲಕ ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಹಂತದಲ್ಲಿ ಮತ್ತು ಕೆಲವು ಸಮುದಾಯ ಹಂತದಲ್ಲಿನ ಗ್ರಾಮಪಂಚಾಯಿತಿ ಸದಸ್ಯರು, ಶಿಕ್ಷಣ ಆಸಕ್ತರಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್‌.ಈರಣ್ಣ ಮಾತನಾಡಿ, 2021 ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನದ ಮೂಲಕ ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಮೂಲಕ ಸಂಘಗಳು ಸರ್ಕಾರಿ ಶಾಲೆಗಳನ್ನುಸಬಲೀಕರಣ ಮಾಡಲು ಸಂಘಗಳು ಶ್ರಮಿಸಲಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳಿಗೆ ಹಿನ್ನಡೆಯಾಗಿರುವ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮಪಂಚಾಯಿತಿಗಳ ಗ್ರಾಮಗಳಿಗೆ ತೆರಳಿ ಪೋಷಕರ ಮನವೊಲಿಸಿಮಕ್ಕಳನ್ನು ಕಲಿಕೆಗೆ ತೊಡಗಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ಹನುಮಂತಪ್ಪ, ಬಿ.ಆರ್‌.ಪಿ.ಗಳಾದ ಶಿವಣ್ಣ, ಉಮೇಶಯ್ಯ, ಇ.ಸಿ.ಒ ಯರ್ರಿಸ್ವಾಮಿ, ಸಿ.ಆರ್‌.ಪಿ ರಾಷೀದಾ ಬಾನು, ದೈಹಿಕ ಶಿಕ್ಷಣಪರಿವೀಕ್ಷಕ ಶಿವಕುಮಾರ್‌, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್‌.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮೈಲಾರಪ್ಪ, ಜಿಲ್ಲಾ ಸಹಕಾರ್ಯದರ್ಶಿ ಜಿ.ಬಿ.ಮಮತ,ಸರ್ಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ಇ.ಮಲ್ಲೇಶಪ್ಪ, ಉಪಾಧ್ಯಕ್ಷ ಓಂಕಾರಪ್ಪ, ಶಿಕ್ಷಕರಾದ ಹರೀಶ್‌, ಸುರೇಂದ್ರನಾಥ , ಉದಯ್‌ಕುಮಾರ್‌, ಗುರುಪ್ರಸಾದ್‌, ಗೋವಿಂದಪ್ಪ, ಎನ್‌.ಅಸ್ಲಂ, ಸುಮಾ,ಕೆ.ಟಿ.ಸುವರ್ಣಬಾಯಿ, ಪಾಲಾಕ್ಷಿಬಾಯಿ, ನೂರುಲ್ಲಾ, ಶಕೀಲ್‌ ಅಹಮ್ಮದ್‌, ಮಹಾಂತೇಶ್‌, ಈಶ್ವರಪ್ಪ,ನಾಗರಾಜ್‌, ಹಾಗೂ ಹೆಚ್ಚಿನ ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next