Advertisement

34 ವರ್ಷಗಳ ಕಾಲ ಬಂದ್ ಮಾಡಿ ರಾಜ್ಯ ನಾಶ ಮಾಡಿದ್ದು ಸಾಕು; ಮಮತಾ

09:01 AM Jan 08, 2019 | Sharanya Alva |

ಕೋಲ್ಕತಾ:ಸುಮಾರು ಹತ್ತು ಕಾರ್ಮಿಕ ಸಂಘಟನೆಗಳು ಸೇರಿ ಕರೆ ನೀಡಿರುವ ಭಾರತ್ ಬಂದ್ ರಾಜ್ಯದ ಮೇಲೆ ಯಾವ ಪರಿಣಾಮವೂ ಬೀರಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

Advertisement

ಕೇಂದ್ರದ ಜನ ವಿರೋಧಿ ನೀತಿಯ ವಿರುದ್ಧ ಕಾರ್ಮಿಕ ಸಂಘಟನೆಗಳು ಮಂಗಳವಾರ ಮತ್ತು ಬುಧವಾರ ಭಾರತ್ ಬಂದ್ ಗೆ ಕರೆ ನೀಡಿದ್ದವು. ಆದರೆ ಪಶ್ಚಿಮ ಬಂಗಾಳದಲ್ಲಿ ಯಾವುದೇ ಬಂದ್ ಅನ್ನು ಬೆಂಬಲಿಸದಿರುವಂತೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಸಾಕಪ್ಪ, ಸಾಕು..ಕಳೆದ 34 ವರ್ಷಗಳಲ್ಲಿ ಅವರು(ಎಡಪಕ್ಷಗಳು) ಬಂದ್ ಹೆಸರಿನಲ್ಲಿ ರಾಜ್ಯವನ್ನು ನಾಶಮಾಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಬಂದ್ ಗೆ ಅವಕಾಶವೇ ಇಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಸರ್ಕಾರಿ ಅಧಿಕಾರಿಗಳು ರಜೆ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಅಷ್ಟೇ ಅಲ್ಲ ಹೆಚ್ಚುವರಿಯಾಗಿ 500 ಬಸ್ ಗಳು ಓಡಾಡಲಿವೆ ಎಂದು ಸೋಮವಾರ ತಿಳಿಸಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಬ್ಯಾನರ್ಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next