Advertisement

ಹೂವಿನ ಬೆಲೆ ಕುಸಿತ: ರೈತರಿಗೆ ಅಪಾರ ನಷ್ಟ

07:12 PM May 16, 2021 | Team Udayavani |

ಕೊರಟಗೆರೆ: ತಾಲೂಕಿನ ಚನ್ನರಾಯನ ದುರ್ಗಹೋಬಳಿಯಲ್ಲಿ ನೂರಾರು ಎಕರೆ ಪ್ರದೇಶಹೂವಿನಿಂದ ಆವೃತ್ತವಾಗಿದ್ದು, ಹೂವು ಬೆಳೆದರೈತರನ್ನು ಮಾತನಾಡಿಸಿದರೆ ಧ್ವನಿಗಿಂತಮೊದಲು ಕಣ್ಣೀರು ಕಾಣಿಸುತ್ತದೆ.2 ವರ್ಷಗಳಿಂದ ಹೂವಿನ ಬೆಲೆಕುಸಿದಿದೆ. ಹೂವು ಬೆಳೆಗಾರರುಲಕ್ಷಾಂತರ ಮೌಲ್ಯದ ಹೂವನ್ನು ನಾಶಮಾಡಿದ್ದಾರೆ.

Advertisement

ಹೋಬಳಿ ಯಲ್ಲಿ 300ಕ್ಕೂಹೆಚ್ಚು ರೈತರು ಚಾಂದಿನಿ, ಬಟ®Õ…, ಸೇವಂತಿಗೆಬೆಳೆಯುತ್ತಾರೆ. ಕಳೆದ ದೀಪಾವಳಿಯಲ್ಲಿ ಕೆಲವರುಉತ್ತಮ ಬೆಲೆಗೆ ಮಾರಾಟ ಮಾಡಿದ್ದರು. ವರ್ಷದಲ್ಲಿ2 ಸಲ ಕೋವಿಡ್‌ ಬಂದು ಕೋಟ್ಯಂತರ ರೂಪಾಯಿತರುತ್ತಿದ್ದ ಹೂವಿನ ಬೆಳೆ ಸದ್ಯ ರೈತರ ಕೈ ಹಿಡಿದಿಲ್ಲ.ಹೂವನ್ನು ಖರೀದಿಸುವವರು ಇಲ್ಲದೇಹೊಲಗಳಲ್ಲಿಯೇ ಬಿಟ್ಟು ಉಳುಮೆ ಮಾಡಿಸುತ್ತಿದ್ದಾರೆ.

ಇನ್ನೂ ಕೆಲವರು ಕಟಾವು ಯಂತ್ರದ ಮೂಲಕಭೂಮಿಗೆ ಗೊಬ್ಬರವಾಗಲಿ ಎಂದು ಬುಡಕ್ಕೆ ಕಟಾವುಮಾಡುತ್ತಿದ್ದು, ಹೆಚ್ಚಿನವರು ಹೂವಿನಗಿಡಗಳನ್ನು ಜಾನುವಾರುಗಳಿಗೆ ಮೇವಿನರೂಪದಲ್ಲಿ ಉಪಯೋಗಿಸುತ್ತಿದ್ದಾರೆ. ಹಲವರುನೀರು ಹಾಯಿಸುವುದನ್ನು ನಿಲ್ಲಿಸಿ ಒಣಗಲುಬಿಟ್ಟಿದ್ದಾರೆ. ತಾಲೂಕಿನ ಅಜ್ಜಿಹಳ್ಳಿ, ಥರಟಿ, ಅಗ್ರಹಾರಸೂರೇನಹಳ್ಳಿ, ದೇವರಹಳ್ಳಿ ದೊಡ್ಡ ನರಸಯ್ಯನ ಪಾಳ್ಯ,ಮಣವಿನಕುರಿಕೆ ಸೇರಿದಂತೆ ಮೂವತ್ತಕ್ಕೂ ಹೆಚ್ಚುಹಳ್ಳಿಗಳಲ್ಲಿ ವಿವಿಧ ಜಾತಿ ಹೂವು ಬೆಳೆಯುತ್ತಾರೆ. ಪ್ರತಿರೈತ ಕನಿಷ್ಠ 50 ಸಾವಿರ ರೂ.ದಿಂದ 1ಲಕ್ಷದವರೆಗೆ ಹಣಖರ್ಚು ಮಾಡುತ್ತಾರೆ.

ಕೂಲಿ ಹಣವು ಸಿಗುತ್ತಿಲ್ಲ: ಚಾಂದಿನಿ ಮತ್ತು ಬಟನ್ಸ್ 1.20ಎಕರೆಯಲ್ಲಿ 1ಲಕ್ಷ ರೂ. ಖರ್ಚು ಮಾಡಿಬೆಳೆದಿದ್ದಾರೆ. ಹೂವು ದಟ್ಟವಾಗಿ ಕೂಯ್ಯುವ ಹಂತಕ್ಕೆಬಂದಿದೆ. ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರುಮುಂದೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಕೊಳ್ಳುವವರುಯಾರು ಬರುತ್ತಿಲ್ಲ. ಖರೀದಿದಾರರು ಬೇಕಾಬಿಟ್ಟಿದರದಲ್ಲಿ ಹೂವನ್ನು ಕೇಳುತ್ತಾರೆ. ನನಗೆ ಹೂವನ್ನುಕೊಯ್ದ ಕೂಲಿ ಹಣವು ಸಿಗುತ್ತಿಲ್ಲ ಎಂದು ರೈತಮುಖಂಡ ಟಿ.ಬಿ ನಾಗೇಂದ್ರ ಅಳಲನ್ನುತೋಡಿಕೊಂಡರು.

ಸಿದ್ದರಾಜು.ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next