Advertisement
ಹುಟ್ಟಿದ ಊರು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸ ಅಥವಾ ಕೆಲಸಕ್ಕೆಂದು ದೂರದೂರಿಗೆ ಬರುವ ಅನೇಕ ಯುವ ಮನಸ್ಸುಗಳು ಒಂಟಿತನಕ್ಕೆ ಸಿಲುಕಿ ಮಾನಸಿಕವಾಗಿ ಕುಗ್ಗಿ ಹೋಗುತ್ತವೆ. ಇದು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಉಂಟು ಮಾಡಬಹುದು. ಇದರಿಂದ ಹೊರ ಬರಲು ಒಂಟಿತನವನ್ನೇ ನಿಮ್ಮ ಖುಷಿಯ ಸಾಧನವನ್ನಾಗಿ ಪರಿವರ್ತಿಸಿಕೊಳ್ಳಿ. ಆಗ ಅದು ನಿಮ್ಮನ್ನು ಕಾಡಲಾರದು.
ಸಂಗೀತಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಒಂಟಿತನಕ್ಕೆ ಇದು ದಿವ್ಯ ಔಷಧವೂ ಹೌದು. ನಿಮಗಿಷ್ಟವಾದ ಸಂಗೀತವನ್ನು ಕೇಳುವ ಮೂಲಕ ನೀವು ಸಂತೋಷವಾಗಿರಲು ಸಾಧ್ಯ. ಅಥವಾ ಸಂಗೀತ ತರಗತಿಗೆ ಸೇರಿಕೊಳ್ಳಬಹದು. ಪುಸ್ತಕ ಓದಿ
ಒಂದು ಉತ್ತಮ ಪುಸ್ತಕ ಒಬ್ಬ ಆತ್ಮೀಯ ಗೆಳೆಯನಿಗೆ ಸಮಾನ. ನಿಮ್ಮ ಅಭಿರುಚಿಗೆ ತಕ್ಕಂಥ ಪುಸ್ತಕ ಕೊಂಡು ಅದನ್ನು ಓದಿ. ಇದರಿಂದ ಹೊಸದೇನಾದರೂ ತಿಳಿಯತ್ತದೆ ಮತ್ತು ಒಂಟಿತನದ ಬೇಸರ ಕಾಡುವುದಿಲ್ಲ.
Related Articles
ಕೆಲಸಕ್ಕಾಗಿ ಪರ ಊರಿಗೆ ಬಂದು ಬಾಡಿಗೆ ರೂಮ್‌ನಲ್ಲಿ ಇದ್ದೀರೆಂದರೆ ಅಲ್ಲಿ ನಿಮ್ಮ ಒಂಟಿತನ ಹೋಗಲಾಡಿಸಲು ಅಡುಗೆ ಮನೆ ಕೂಡ ನಿಮಗೊಂದು ಅತ್ಯುತ್ತಮ ಸಂಗಾತಿ. ಹೌದು, ಅಡುಗೆ ಮಾಡುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಅಲ್ಲದೇ ನೀವೇ ತಯಾರಿಸಿದ ಅಡುಗೆಯ ರುಚಿಯನ್ನು ಸವಿಯುವಾಗ ಸಿಗುವ ಮಜಾನೇ ಬೇರೆ.
Advertisement
ಕರೆ ಮಾಡಿಇಂದಿನ ತಂತ್ರಜ್ಞಾನ ದೂರ ವಿರುವವರನ್ನೂ ಹತ್ತಿರವಾಗಿಸುತ್ತದೆ. ಇವುಗಳಿಂದ ನಿಮ್ಮ ತಂದೆ- ತಾಯಿ, ಕುಟುಂಬದವರು, ಸ್ನೇಹಿತರಿಗೆ ಕರೆ ಮಾಡುವ ಮೂಲಕ ಮನಸ್ಸು ಹಗುರ ಮಾಡಿಕೊಳ್ಳಬಹುದು. ಬೆಳಗಿನ ವ್ಯಾಯಾಮ,ಧ್ಯಾನ
ಬೆಳಗಿನ ವ್ಯಾಯಾಮ ದಿನವಿಡೀ ನೀವು ಖುಷಿಯಾಗಿರಲು ಬಲು ಉಪಕಾರಿ. ಬೆಳಗ್ಗೆ ಬೇಗನೆ ಎದ್ದು ಶುದ್ಧವಾದ ಪರಿಸರದಲ್ಲಿ ಸ್ವಲ್ಪ ಹೊತ್ತು ಓಡಾಡಿ. ಅನಂತರ ಧ್ಯಾನ ಮಾಡಿದರೆ ಮನಸ್ಸು ಪ್ರಫುಲ್ಲವಾಗಿ ಫುಲ್ ಚಾರ್ಜ್ ಆಗುತ್ತೆ. - ಶಿವಾನಂದ್ ಎಚ್.