Advertisement

ವಿದ್ಯಾರ್ಥಿ ಜೀವನ ಆನಂದಿಸಿ: ಡಾ|ನರೇಂದ್ರ

04:27 PM Feb 04, 2022 | Team Udayavani |

ಧಾರವಾಡ: ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಅದನ್ನು ಆನಂದಿಸಬೇಕು ಎಂದು ಆಕಾಶವಾಣಿ ಉದ್ಘೋಷಕ ಡಾ| ಶಶಿಧರ ನರೇಂದ್ರ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಏರ್ಪಡಿಸಿದ್ದ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಾನುಲಿ ಕಾರ್ಯಕ್ರಮ ನಿರ್ಮಾಣ, ಕೌಶಲ್ಯ ಕಾರ್ಯಾಗಾರ ಉದ್ಘಾಟಿಸಿ ಆವರು ಮಾತನಾಡಿದರು.

Advertisement

ಭವಿಷ್ಯಕ್ಕಾಗಿ ನಿ ರ್ದಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಆ ಕ್ಷೇತ್ರದಲ್ಲಿ ಗಟ್ಟಿಯಾದ ಹೆಜ್ಜೆಗಳನ್ನಿಟ್ಟು ಸಮಾಜ ನೆನಪಿಡುವಂತಹ ಸಾಧನೆ ಮಾಡಬೇಕು ಎಂದರು.

ಬದುಕಿನಲ್ಲಿ ವಿದ್ಯಾರ್ಥಿ ಜೀವನ ಎಂಬುದು ಬಹು ಅಮೂಲ್ಯವಾಗಿರುವ ಘಳಿಗೆ. ಅದನ್ನು ಅನುಭವಿಸಬೇಕು. ಪ್ರಸ್ತುತ ವಿದ್ಯಾರ್ಥಿಗಳಿಗೆ ಹಿಂದಿಗಿಂತ ಶೈಕ್ಷಣಿಕ ಸೌಲಭ್ಯಗಳು, ಆಯ್ಕೆಗಳು ಹೇರಳವಾಗಿದ್ದು, ಅವುಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳುವ ಮತ್ತು ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕ ಡಾ| ಸಂಜಯಕುಮಾರ ಮಾಲಗತ್ತಿ ಮಾತನಾಡಿ, ಇಂದಿನ ಆಧುನಿಕ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಅತೀ ವೇಗವಾಗಿ ಬೆಳೆಯುತ್ತಿದೆ. ಸಮಾಜದಲ್ಲಿ ಇಂದು ನವ ಮಾಧ್ಯಮಗಳ ಪ್ರಭಾವ ವ್ಯಾಪಕವಾಗಿದ್ದು, ಅದಕ್ಕೆ ತಕ್ಕಂತೆ ಸುದ್ದಿ, ಮಾಹಿತಿ ಪ್ರಸಾರದ ವಿಧಾನ, ತಂತ್ರಗಳು ಬದಲಾಗುತ್ತಿವೆ ಎಂದರು.

ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ವ್ಯಾಪಕವಾಗಿದ್ದು, ಬದಲಾಗುತ್ತಿರುವ ಮಾಧ್ಯಗಳಲ್ಲಿ ಯಶಸ್ಸು ಸಾಧಿಸಲು ವೃತ್ತಿ ಕೌಶಲ್ಯ ರೂಢಿಸಿಕೊಳ್ಳಬೇಕಿರುವುದು ಇಂದಿನ ಅಗತ್ಯ ಎಂದರು.

Advertisement

ಉಪನ್ಯಾಸಕರಾದ ಡಾ|ನಯನಾ ಗಂಗಾಧರಪ್ಪ, ಡಾ|ಶಕುಂತಲಾ ಸೊರಟೂರ, ಡಾ|ವೆಂಕನಗೌಡ ಪಾಟೀಲ, ಡಾ|ಈಶ್ವರಗೌಡ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಸುಮಲತಾ ಮೂಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ವಿಭಾಗದ ಹಿರಿಯ ವಿಧ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಸುಮಲತಾ ಸ್ವಾಗತಿಸಿದರು. ಸುನಿಲ ಲಮಾಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next