Advertisement

ಕೋಪ ನಿಯಂತ್ರಿಸಿದರೆ ಬದುಕು ಆನಂದಮಯ: ಆಚಾರ್ಯ ಶ್ರೀ

12:58 PM Jan 02, 2018 | Team Udayavani |

ವೇಣೂರು: ಇಂದಿನ ದಿನ ತುಂಬಾ ಉತ್ತಮವಾಗಿದೆ ಮತ್ತು ಪರಿವಾರದೊಂದಿಗೆ ಕಳೆಯುವ ಪ್ರತೀ ದಿನವೂ ಉತ್ತಮವಾಗಿರುತ್ತದೆ. ಆದರೆ ನಮ್ಮ ಎಲ್ಲ ಆನಂದ ಭಾವನೆಗಳನ್ನು ನಿಯಂತ್ರಿಸುವುದು ಕೋಪ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಜೀವನವನ್ನು ಆನಂದದಿಂದ ಕಳೆಯಬಹುದು ಎಂದು ಪುಷ್ಪಗಿರಿ ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ ಮಹಾರಾಜ್‌ ನುಡಿದರು.

Advertisement

ವೇಣೂರು ಶ್ರೀ ಬಾಹುಬಲಿ ಸ್ವಾಮಿಯ ಅತಿಶಯ ಕ್ಷೇತ್ರದಲ್ಲಿ ಸೋಮವಾರ ಜರಗಿದ ಶ್ರೀ ಪುಷ್ಪದಂತ ಸಾಗರ ಮಹಾರಾಜರ 64ನೇ ಜನ್ಮ ಮಹೋತ್ಸವ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು. ಭಗವಂತನ ನಾಮಸ್ಮರಣೆ ಒಂದು ಕ್ಷಣ, ಒಂದು ದಿನಕ್ಕೆ ಮೀಸಲಾಗಬಾರದು. ಪ್ರತಿನಿತ್ಯ ಮನೆಗಳಲ್ಲಿ ನಾಮಸಂಕೀರ್ತನೆ ನಡೆಯಬೇಕು ಎಂದರು.

ಮುನಿಶ್ರೀ ಗಿರಿನಾರ್‌ ಸಾಗರ ಮಹಾರಾಜ್‌, ಮುನಿಶ್ರೀ ಪ್ರಮುಖ್‌ ಸಾಗರ ಮಹಾರಾಜ್‌, ಮುನಿಶ್ರೀ ಪ್ರಸಂಗಸಾಗರ ಮಹಾರಾಜ್‌ ಉಪಸ್ಥಿತರಿದ್ದರು. ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಮಾರಂಭವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಆಚಾರ್ಯ ಶ್ರೀಗಳ ಜನ್ಮದಿನದ ಆಚರಣೆ ಭಾಗ್ಯ ಇಲ್ಲಿನ ಜನತೆಯ ಪುಣ್ಯ. ಆಚಾರ್ಯರು ಮುನಿಶ್ರೀಗಳು ಹಾಗೂ ಸ್ವಾಮೀಜಿಯವರ ದರ್ಶನ ಇಲ್ಲಿ ಜತೆಯಾಗಿ ನಡೆದಿದೆ ಎಂದರು.

ಸಮ್ಮಾನ: ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಮಿತಿ ಪದಾಧಿಕಾರಿಗಳು ಸಮ್ಮಾನಿಸಿ ಗೌರವಿಸಿದರು. ಬಳಿಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಮಿ
ತಿಯ ಪರವಾಗಿ ಡಾ| ಹೆಗ್ಗಡೆ ಅವರು ಚಾವುಂಡ ರಾಯ ಬಿರುದು ನೀಡಿ ಸಮ್ಮಾನಿಸಿ ಗೌರವಿಸಿದರು. ಭಾರತೀಯ ಜೈನ್‌ ಮಿಲನ್‌ ರಾಷ್ಟ್ರೀಯ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್‌, ಮಂಗಳೂರು ಅಭೀಷ್‌ ಬಿಲ್ಡರ್‌ನ ಪುಷ್ಪರಾಜ ಜೈನ್‌ ವೇದಿಕೆಯಲ್ಲಿದ್ದರು.

ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸರ್ವಸ್ವವನ್ನು ತ್ಯಜಿಸಿರುವ ಮುನಿಶ್ರೀಗಳ ಪ್ರೇರಣೆಗೆ ಒಳಗಾಗಿ ನಾವು ದುಶ್ಚಟಗಳನ್ನು ದೂರ ಮಾಡಬೇಕು. ದುಶ್ಚಟಗಳನ್ನು ನಿಗ್ರಹಿಸಿದಾಗ ದೇವರ ಅನುಗ್ರಹಶಕ್ತಿ ಜಾಸ್ತಿಯಾಗುತ್ತದೆ. ಮನುಷ್ಯನ ಕೋಪ ಆತಂಕಕಾರಿ. ಇದರಿಂದ ಸಂಬಂಧ, ಕ್ರಿಯಾಶೀಲತೆ, ಆರೋಗ್ಯ ಹದಗೆಡುತ್ತದೆ.
ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next