Advertisement
ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನಲ್ಲಿ ಶುಕ್ರವಾರ ನಡೆದ “ಉದಯವಾಣಿ-ಎಸ್.ಎಲ್. ಶೇಟ್ ಡೈಮಂಡ್ ಹೌಸ್ ದೀಪಾವಳಿ ವಿಶೇಷಾಂಕ ಧಮಾಕಾ-2020’ರ ವಿಜೇತ ಅದೃಷ್ಟ ಶಾಲಿಗಳಿಗೆ ಬಹುಮಾನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಓದುವ ಹವ್ಯಾಸ ಹೆಚ್ಚಳ :
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್ ಕುಮಾರ್ ಮಾತನಾಡಿ, ಕೊರೊನಾ ಸಂಕಷ್ಟದ ವೇಳೆ ಜನರು ಓದುವ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿಕೊಂಡಿದ್ದರು ಎನ್ನುವುದು ಗಮನಾರ್ಹ. ಈ ಕಾರಣಕ್ಕೆ ಈ ಬಾರಿಯ ಉದಯವಾಣಿ ದೀಪಾವಳಿ ವಿಶೇಷಾಂಕದ ಮಾರಾಟ ಕೂಡ ಶೇ.40ರಿಂದ ಶೇ. 50ರಷ್ಟು ಏರಿಕೆಯಾಗಿದೆ. ಬಹುಮಾನ ವಿಜೇತರು ರಾಜ್ಯಾದ್ಯಂತ ವಿಸ್ತರಿಸಿರು ವುದು ಇದಕ್ಕೆ ನಿದರ್ಶನ. ಇದು ಉದಯವಾಣಿ ಬಗ್ಗೆ ಓದುಗರಿಗೆ ಇರುವ ಅಭಿಮಾನದ ಸಂಕೇತ ಎಂದು ಹೇಳಿದರು.
ಉದಯವಾಣಿ-ಎಸ್.ಎಲ್. ಶೇಟ್ ಡೈಮಂಡ್ ಹೌಸ್ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು, ಎರಡು ಸಂಸ್ಥೆಗಳ ನಡುವಿನ ಸಹಯೋಗ ಇದೇ ರೀತಿ ಮುಂದು ವರಿಯಲಿ ಎಂದು ಅವರು ಹಾರೈಸಿದರು.
ಸಂಬಂಧ ಇನ್ನಷ್ಟು ಬೆಳೆಯಲಿ :
ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನ ಆಡಳಿತ ಪಾಲುದಾರ ರವೀಂದ್ರ ಶೇಟ್ ಮಾತನಾಡಿ, ಪಾರದರ್ಶಕ ಹಾಗೂ ಜನಪರ ನಿಲುವಿನಿಂದಾಗಿ ಉದಯವಾಣಿಯು ಕರಾವಳಿಯ ನಂಬರ್ ವನ್ ಪತ್ರಿಕೆಯಾಗಿ ಬೆಳೆದಿದೆ. ಈ ಪತ್ರಿಕೆಯ ಜತೆ ಸಹಯೋಗ ಹೊಂದಿ ದೀಪಾವಳಿ ವಿಶೇಷಾಂಕ ಧಮಾಕಾದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮಗೆ ಸಂತಸ ತಂದಿದೆ. ಗ್ರಾಹಕರೊಂದಿಗೆ ನಮ್ಮ ಹಾಗೂ ಉದಯವಾಣಿಯೊಂದಿಗಿನ ಓದುಗರ ಈ ವಿಶ್ವಾಸಾರ್ಹ ಪರಂಪರೆ ಹಾಗೂ ಸಂಬಂಧ ಇನ್ನಷ್ಟು ಬೆಳೆಯಲಿ ಹಾಗೂ ಮುಂದುವರಿಯಲಿ ಎಂದು ಆಶಿಸಿ ವಿಜೇತರನ್ನು ಅಭಿನಂದಿಸಿದರು.
ಶೀಘ್ರದಲ್ಲಿ ಇನ್ನೊಂದು ಮಳಿಗೆ :
ಗ್ರಾಹಕರ ಸಂತೃಪ್ತಿಯೇ ಧ್ಯೇಯವಾಗಿಟ್ಟುಕೊಂಡು ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಕಳೆದ 74 ವರ್ಷಗಳಿಂದ ಗ್ರಾಹಕ ಸ್ನೇಹಿ ವ್ಯವಹಾರ ನಡೆಸುತ್ತಿದೆ. ಶೀಘ್ರದಲ್ಲಿ ಲೇಡಿಹಿಲ್‌ನಲ್ಲಿ ಇನ್ನೊಂದು ಸುಸಜ್ಜಿತ ಚಿನ್ನಾಭರಣ ಮಳಿಗೆ ಆರಂಭಿಸಲಾಗುವುದು ಎಂದು ರವೀಂದ್ರ ಶೇಟ್ ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಪಾಲುದಾರರಾದ ಶರತ್ ಶೇಟ್, ಪ್ರಸನ್ನ ಶೇಟ್, ಪ್ರಸಾದ್ ಶೇಟ್, ದೀಪ್ತಿ ಶೇಟ್ ಉಪಸ್ಥಿತರಿದ್ದರು. ಕಂಚನ್ ಶೇಟ್ ಅವರು ಬಹುಮಾನ ವಿಜೇತರನ್ನು ಅಭಿನಂದಿಸಿ ಹೊಸ ವರ್ಷದ ಶುಭಾಶಯ ಕೋರಿದರು.
ಎಂಎಂಎನ್‌ಎಲ್ ಮ್ಯಾಗಸಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್ ನ್ಯಾಶನಲ್ ಹೆಡ್ ಆನಂದ್ ಕೆ. ಪ್ರಸ್ತಾವನೆಗೈದು, ಈ ಬಾರಿ 3,600 ಓದುಗರು ಪ್ರತಿಕ್ರಿಯಿಸಿದ್ದು, ಆ ಪೈಕಿ 2,300 ಮಂದಿ ಸರಿ ಉತ್ತರ ಕಳುಹಿಸಿದ್ದರು. ಅವರಲ್ಲಿ ಒಟ್ಟು 27 ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗಿದೆ. ಒಟ್ಟು 1.50 ಲಕ್ಷ ರೂ. ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದರು.
ಉದಯವಾಣಿಯ ಮ್ಯಾಗಸಿನ್ ಸಂಪಾದಕ ಪೃಥ್ವೀರಾಜ್ ಕವತ್ತಾರ್ ಸ್ವಾಗತಿಸಿದರು. ಉದಯವಾಣಿಯ ಮಂಗಳೂರಿನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ವಂದಿಸಿದರು. ವರದಿಗಾರ ದಿನೇಶ್ ಇರಾ ನಿರೂಪಿಸಿದರು.
ಉದಯವಾಣಿ ತಪ್ಪದೆ ಓದುತ್ತಾ ಬಂದಿದ್ದೇನೆ :
ಬಂಪರ್ ಬಹುಮಾನ ವಿಜೇತರಾದ ಹುಬ್ಬಳ್ಳಿಯ ನೇತ್ರಾವತಿ ಅಣ್ಣಪ್ಪ ಪರವಾಗಿ ಅವರ ಪತಿ ಅಣ್ಣಪ್ಪ ಅವರು, ಮಾತನಾಡಿ “ನಾನು ಉದಯವಾಣಿಯನ್ನು ತಪ್ಪದೆ ಓದುತ್ತಾ ಬಂದಿದ್ದೇನೆ. ಇದೀಗ ದೀಪಾವಳಿ ವಿಶೇಷಾಂಕ ಧಮಾಕಾ ಬಹುಮಾನ ಬಂದಿರುವುದು ತುಂಬಾ ಖುಷಿ ಉಂಟು ಮಾಡಿದೆ ಎಂದರು.
ಉದಯವಾಣಿಯಿಂದ ಓದುವ ಆಸಕ್ತಿ :
ಪ್ರಥಮ ಬಹುಮಾನ ವಿಜೇತರಾದ ಗಾಯತ್ರಿ ನಾಯಕ್ ಪರವಾಗಿ ಅವರ ಪತಿ ದಿನಕರ ಅವರು ಮಾತನಾಡಿ, “ಉದಯವಾಣಿಯು ನನ್ನಲ್ಲಿ ಪತ್ರಿಕೆ ಓದುವ ಹವ್ಯಾಸ ಮತ್ತು ಆಸಕ್ತಿ ಬೆಳೆಸಿದೆ. ದೀಪಾವಳಿ ವಿಶೇಷಾಂಕ ಮತ್ತು ತರಂಗವನ್ನು ಮೊದಲ ಸಂಚಿಕೆಯಿಂದಲೂ ಓದುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಉದಯವಾಣಿ ಜನರ ವಿಶ್ವಾಸಾರ್ಹತೆಯನ್ನು ಗಳಿಸಿದ್ದು, ಅಚ್ಚು ಮೆಚ್ಚಿನ ಪತ್ರಿಕೆಯಾಗಿದೆ ಎಂದರು.