Advertisement

ಸ್ಕೌಟ್ಸ್‌-ಗೈಡ್ಸ್‌ನಿಂದ ಸೇವಾ ಭಾವನೆ ವೃದ್ಧಿ: ಸಂದೀಪ ಬೆಳಗಲಿ

06:09 PM Feb 23, 2023 | Team Udayavani |

ಜಮಖಂಡಿ: ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾಭಾವನೆ ಬೆಳೆಸಿಕೊಳ್ಳಲು ಸ್ಕೌಟ್ಸ್‌ ಘಟಕಗಳು ಅತ್ಯಂತ ಅವಶ್ಯ. ಮಾನವೀಯ ಮೌಲ್ಯಗಳು ಬೆಳೆಯಲು ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸಂದೀಪ ಬೆಳಗಲಿ ಹೇಳಿದರು.

Advertisement

ಹುನ್ನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಐಕ್ಯೂಎಸಿ ಮತ್ತು ಸ್ಕೌಟ್ಸ್‌ ಘಟಕದ ಸಹಯೋಗದಲ್ಲಿ ನಡೆದ ಸ್ಕೌಟ್ಸ್‌ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಧಾರ್ಮಿಕ ಸಹಿಷ್ಣುತೆ ತರುವಲ್ಲಿ ಯುವಕರ ಪಾತ್ರ ದೊಡ್ಡದು. ಸುಶಿಕ್ಷಿತರಾಗಿ ಮಾನವೀಯ ಮೌಲ್ಯ ರೂಢಿಸಿಕೊಂಡು ದೇಶದ ಆಸ್ತಿಯಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕಲಾವತಿ ಪೋತಿ ಮಾತನಾಡಿ, ಸ್ಕೌಟ್‌ ದಿನಾಚರಣೆ ಬೆಡೆನ್‌ ಪೊವೆಲ್‌ ಜನ್ಮದಿನ ನಿಮಿತ್ತ ಪ್ರತಿ ವರ್ಷ ಫೆ.22ರಂದು ಆಚರಿಸಲಾಗುತ್ತದೆ. ಇಂಗ್ಲೆಂಡಿನ ನಿವೃತ್ತ ಸೈನ್ಯಾಧಿಕಾರಿಯಾಗಿದ್ದ ಲಾರ್ಡ್‌ ಬೆಡನ್‌ ಪೊವೆಲ್‌ ಅವರಿಂದ 1907ರಲ್ಲಿ ಗಂಡು ಮಕ್ಕಳ ಸ್ಕೌಟ್ಸ್‌ ಆರಂಭಿಸಿದರು. ಭಾರತ ಸ್ಕೌಟ್ಸ್‌-ಗೈಡ್ಸ್‌ ಸಂಸ್ಥೆ ಸ್ವಯಂ ಸೇವಾ ಸಂಸ್ಥೆಯಾಗಿದೆ ಎಂದರು.

ಪ್ರಾಂಶುಪಾಲರಾದ ಡಾ| ಸುನಂದಾ ಶಿರೂರ ಅಧ್ಯಕತೆ ವಹಿಸಿ ಮಾತನಾಡಿ, ಸ್ಕೌಟ್ಸ್‌ ಒಂದು ವಿಶೇಷ ಘಟಕ ಆಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ವೇಳೆ ಡಾ| ಸತೀಶಗೌಡ, ಪ್ರೊ| ಪಿ.ಡಿ. ಬಡಿಗೇರ ಇತರರಿದ್ದರು. ರಾಣಿ ತಿಮ್ಮಗೌಡರ ಪ್ರಾರ್ಥಿಸಿದರು. ಆಕಾಶ ಡಪ್ಪಳಾಪುರ ಸ್ವಾಗತಿಸಿದರು. ಕುಮಾರ ಗಡಗಿ ನಿರೂಪಿಸಿದರು. ಕಿರಣಕುಮಾರ ಕೆಳಗಿನಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next