Advertisement

“ಕುಟುಂಬ ಸಮ್ಮಿಲನದಿಂದ ಮಾನವೀಯ ಸಂಬಂಧ ವೃದ್ಧಿ ‘

09:29 PM Jun 17, 2019 | Sriram |

ಕಾಪು : ಪರಸ್ಪರ ಮಾನವೀಯ ಸಂಬಂಧಗಳನ್ನು ಭದ್ರಗೊಳಿಸುವಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಹಕಾರಿಯಾಗುತ್ತದೆ.

Advertisement

ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳೂ ಕೂಡಾ ಪಾಲ್ಗೊಳ್ಳುವ ಮೂಲಕ ಮೌಲ್ಯಗಳು ವೃದ್ಧಿಸುತ್ತವೆ ಎಂದು ಜಾನಪದ ಕಲಾವಿದೆ ಕುಸುಮಾ ಕಾಮತ್‌ ಕರ್ವಾಲು ಹೇಳಿದರು.
ಕಾಪು ರೋಟರಿ ಶತಾಬ್ದಿ ಭವನದಲ್ಲಿ ರವಿವಾರ ಜರಗಿದ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿ ಪರಂಪರೆಯಲ್ಲಿ ಬೆಳೆದ ನಾವು ಇಂದು ಕೃಷಿಯಿಂದ ದೂರವಾಗುತ್ತಿರುವುದು ಭವಿಷ್ಯ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ. ಹಳ್ಳಿಯಲ್ಲಿ ಬೆಳೆದವರಿಗೆ ಪರಿಸರವೇ ಜೀವನ ಮೌಲ್ಯ ಹಾಗೂ ಬದುಕುವುದನ್ನು ಕಲಿಸುತ್ತದೆ. ಉತ್ತಮ ಸಂಸ್ಕಾರ, ಸಂಸ್ಕೃತಿಗಳು ಹಳ್ಳಿ ಪ್ರದೇಶದಲ್ಲಿ ಮಾತ್ರ ಉಳಿದಿವೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ವಲಯ ಐದರ ಸಹಾಯಕ ಗವರ್ನರ್‌ ಕೆ. ಸೂರ್ಯಕಾಂತ್‌ ಶೆಟ್ಟಿ, ವಲಯ ಸೇನಾನಿ ಸದಾಶಿವ ಭಟ್‌ ಶುಭ ಹಾರೈಸಿದರು. ಪುಟಾಣಿಗಳಿಗೆ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಿ ಅಭಿನಂದಿಸಲಾಯಿತು.

ನಿಯೋಜಿತ ರೋಟರಿ ಅಧ್ಯಕ್ಷ ಮನೋಹರ್‌ ರಾವ್‌ ಕುಂಜೂರು, ನಿಯೋಜಿತ ಕಾರ್ಯದರ್ಶಿ ಸುರೇಶ್‌ ರಾವ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ಮಣ್‌ ರೋಟರಿ ಪೂರ್ವಾಧ್ಯಕ್ಷ ಸುರೇಶ್‌ ರಾವ್‌, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಕೃಷ್ಣಮೂರ್ತಿ ಕಾಮತ್‌ ಕರ್ವಾಲು ರೋಟರಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ರೋಟರಿ ಅಧ್ಯಕ್ಷ ಜೇಮ್ಸ್‌ ಡಿ ಸೋಜ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಶೆಟ್ಟಿ ವಂದಿಸಿದರು. ರೋಟರಿ ಸದಸ್ಯತನ ಹಾಗೂ ಸೌಹಾರ್ದ ಸಮಿತಿಯ ನಿರ್ದೇಶಕ ವಿದ್ಯಾಧರ್‌ ಪುರಾಣಿಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next